Breaking News

ಸಾಂತ್ವನ ಹೇಳುವುದು ಬಿಟ್ಟು ಇನ್ನಷ್ಟು ತೊಂದರೆ ಕೊಡುವ ಕೆಲಸ ಆಗತಾ ಇದೆ- ಮಹೇಶ ಟೆಂಗಿನಕಾಯಿ

Spread the love

ಸಾಂತ್ವನ ಹೇಳುವುದು ಬಿಟ್ಟು ಇನ್ನಷ್ಟು ತೊಂದರೆ ಕೊಡುವ ಕೆಲಸ ಆಗತಾ ಇದೆ- ಮಹೇಶ ಟೆಂಗಿನಕಾಯಿ

ಹುಬ್ಬಳ್ಳಿ: ನಗರದ ವಿದ್ಯಾನಗರದ ಬಿವಿಬಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ನೇಹಾ ನಿರಂಜನ ಹಿರೇಮಠ ಕೊಲೆ ಪ್ರಕರಣ ಬಗ್ಗೆ ಸರ್ಕಾರ ಯಾಕೆ ಸ್ಪಷ್ಟತೆ ಕೊಡತಾ ಇಲ್ಲ ಕೊಲೆ‌ ಆರೋಪಿ ಫಯಾಜ್ ಮೊಬೈಲ್ ನಲ್ಲಿ ಪೋಟೋ ಹರಿಬಿಟ್ಡು ತೇಜೋವಧೆ‌ ಮಾಡಲಾಗುತ್ತದೆ ಎಂದು
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಶಾಸಕ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ
ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ನೇಹಾ ನಿರಂಜನ ಹಿರೇಮಠ ಕೊಲೆ
ಒಂದು ಕಡೆ ಗೃಹ ಸಚಿವರು ಆಕಸ್ಮಿಕ ಅಂದರೆ ಇನ್ನೊಂದು ಕಡೆ ಸಿಎಂ ವೈಯಕ್ತಿಕ ಅಂತಾರೆ ಮೊದಲೇ
ನೇಹಾ ನಿರಂಜನ ಹಿರೇಮಠ ಕುಟುಂಬ ಸಂಕಷ್ಟದಲ್ಲಿ ಇದೆ
ನೇಹಾ ನಿರಂಜನ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಬೇಕು ಅದನ್ನ ಬಿಟ್ಟು ಕೊಲೆ ಆರೋಪಿ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ.‌‌ಕೊಲೆ ಆರೋಪಿ
ಫಯಾಜ್ ಕೊಲೆ ಮಾಡಿದ ನಂತರ ಫಯಾಜ್ ಮೊಬೈಲ್ ಪೊಲೀಸರ ಬಳಿ ಇತ್ತುಈಗ ಫುಯಾಜ್ ಮೂಬೈಲ್ ನಲ್ಲಿನ ಪೋಟೋ ವೈರಲ್ ಮಾಡಲಾಗುತ್ತದೆ
ನೇಹಾ ನಿರಂಜನ ಹಿರೇಮಠ ಹಾಗೂ ಅವರ ಕುಟುಂಬಕ್ಕೆ ಕೆಟ್ಟ ಹೆಸರು ಕೊಡಲಾಗುತ್ತದೆ ಇದನ್ನ ವ್ಯವಸ್ಥವಾಗಿ
ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳ ಮೂಲಕ ಮಾಡಿಸುತ್ತಿದೆ ಸೌಜನ್ಯಕ್ಕಾದರು ಮುಖ್ಯಮಂತ್ರಿ ಸಿದ್ದರಾಮಯ್ಯಾ ನೇಹಾ ಮನೆಗೆ ಬರಲಿಲ್ಲ ಸಾಂತ್ವನ ಹೇಳಲಿಲ್ಲ ಅದೇ ಮುಸ್ಲಿಂ ಸಮುದಾಯದವರು ಆಗಿದ್ದರೆ ಮೊದಲು ಬರುತಿದ್ದರು. ಇಲ್ಲಿ ಅಮಾಯಕ ವಿದ್ಯಾರ್ಥಿನಿ ಕೊಲೆ ಆಗಿದೆ ಧರ್ಮ ಜಾತಿ ಧರ್ಮ ನೋಡಬಾರದು ಎಂದರು


Spread the love

About Karnataka Junction

    Check Also

    ಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು

    Spread the loveಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು ಹುಬ್ಬಳ್ಳಿ: ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿರುವ …

    Leave a Reply

    error: Content is protected !!