Breaking News

ಕಾನೂನು ತಿದ್ದುಪಡಿ ಮಾಡಿ, ಸೂಕ್ತ ಕಾನೂನು ಜಾರಿಯಾಗಬೇಕು- ಮಾನೆ

Spread the love

ಕಾನೂನು ತಿದ್ದುಪಡಿ ಮಾಡಿ, ಸೂಕ್ತ ಕಾನೂನು ಜಾರಿಯಾಗಬೇಕು- ಮಾನೆ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ
ನೇಹಾ ಹಿರೇಮಠ ನಂಬಲಾರದ ಘಟನೆಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ ಬಹಳ ‌ನೋವಾಗಿದೆ ಇದಕ್ಕೆ ಕಡಿವಾಣ ಹಾಕಬೇಕುಕಾನೂನು ತಿದ್ದುಪಡಿ ಮಾಡಿ, ಸೂಕ್ತ ಕಾನೂನು ಜಾರಿಯಾಗಬೇಕು ಎಂದು ಹಾವೇರಿ ಜಿಲ್ಲೆಯ ಹಾನಗಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಶ್ರೀನಿವಾಸ ಮಾನೆ ಹೇಳಿದರು.
ನಗರದಲ್ಲಿಂದು ಬಿಡ್ನಾಳ ಗ್ರಾಮದಲ್ಲಿನ ನಿರಂಜನ ಹಿರೇಮಠ ನಿವಾಸಕ್ಕೆ ತೆರಳಿ ನಿರಂಜನ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು. ನಿರಂಜನ ಹಿರೇಮಠ ಹಾಗೂನಾವೆಲ್ಲಾ ಜೊತೆಯಾಗಿ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿದವರು
ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಇಂತಹ ಘಟನೆ ನಡೆಯುತ್ತಿವೆಇದಕ್ಕೆ ಕಡಿವಾಣ ಹಾಕಬೇಕಿದ್ದು ಕ್ರೈಮ್ ಮಾಡುವ ಮನಸ್ಸುಗಳನ್ನು ಅಧೈರ್ಯಗೊಳಿಸಬೇಕಿದೆ
ಸೂಕ್ತ ವೇದಿಕೆಯಲ್ಲಿ ಪ್ರಸ್ತಾಪ ಮಾಡಿ, ಘಟನೆ ನಡೆಯದಂತೆ ತಡೆಯಬೇಕಿದೆ ಎಂದ ಅವರು
ಚುನಾವಣೆ ಹತ್ತಿರದಲ್ಲಿದೆ, ಅನ್ಯ ಕೋಮಿನ ವ್ಯಕ್ತಿ ಭಾಗಿಯಾಗಿದ್ದಾನೆ
ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆಕುಟುಂಬದ ಜೊತೆ ಶಕ್ತಿಯಾಗಿ ನಿಲ್ಲಬೇಕು
ಕುಟುಂಬದ ದುಃಖವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದುವೈಯಕ್ತಿಕ ಕಾರಣಕ್ಕೆ ಇಂತಹ ಘಟನೆಗಳು ನಡೆಯುತ್ತವೆ ಅಂತಾ ಸಿಎಮ್ ಹೇಳಿದ್ದಾರೆವೈಯಕ್ತಿಕ ಅಂದರೆ ಒಬ್ಬ ವ್ಯಕ್ತಿಯ ಕಡೆಯಿಂದ ಆಗಿರಬಹುದು
ವ್ಯಕ್ತಿ ತನ್ನ ಆಸೆ ಈಡೇರಿಸಿಕೊಳ್ಳಲು ಹೀಗೆ ಆಗಿರಬಹುದುರಕ್ತದ ಪ್ರತಿ ಕಣದಲ್ಲಿ ಬಸವ ತತ್ವವಿದೆ
ವಿಕೃತ ಮನಸ್ಸು ಇರುವವರು ಕಾಂಗ್ರೆಸ್‌ ಪಕ್ಷದಿಂದ ಹೊರಗೆ ಇರುತ್ತಾರೆ ಇನ್ನು
ಅಂಜುಮನ್ ಸಂಸ್ಥೆ ಕೂಡ ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಿದೆ
ಯಾರೂ ನ್ಯಾಯವಾದಿಗಳು ಆತನ ಪರವಾಗಿ ವಕಾಲತ್ತು ಹಾಕಬಾರದು
ಅಪರಾಧ ಮಾಡಿದರೆ ಉಳಿಸುವವರು ಯಾರೂ ಇಲ್ಲಾ ಅನ್ನೋ ಭಾವನೆ ಬರಬೇಕು ಎಂದರು


Spread the love

About Karnataka Junction

    Check Also

    ಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು

    Spread the loveಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು ಹುಬ್ಬಳ್ಳಿ: ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿರುವ …

    Leave a Reply

    error: Content is protected !!