*ಸರ್ವ ವರ್ಗದ ಏಳಿಗೆಗೆ ಶ್ರಮಿಸೋ ಶ್ರೇಷ್ಠ ನಾಯಕ ಮೋದಿ*
*- ಬೋವಿ ವಡ್ಡರ ಸಮುದಾಯದವರ ಸಭೆಯಲ್ಲಿ ಸಚಿವ ಪ್ರಹ್ಲಾದ ಜೋಶಿ ಅಭಿಮತ*
ಹುಬ್ಬಳ್ಳಿ: ಸರ್ವ ವರ್ಗದ ಅಭಿವೃದ್ಧಿಗಾಗಿ ಶ್ರಮಿಸುವ ಶ್ರೇಷ್ಠ ನಾಯಕ ಪ್ರಧಾನಿ ನರೇಂದ್ರ ಮೋದಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಲೋಕಸಭೆ ಚುನಾವಣೆ ಪ್ರಯುಕ್ತ ಇಂದು ನಡೆದ ಬೋವಿ ವಡ್ಡರ್ ಸಮಾಜದ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
ಮೋದಿಯವರ ಸಂಪುಟದಲ್ಲಿ ಸಚಿವನಾದಾಗಿಲಿಂದಲೂ ಅವರ ಆಡಳಿತದ ವೈಖರಿಯನ್ನು ನೋಡುತ್ತಿದ್ದೇನೆ. ಅವರು ಸದಾ ದೇಶದ ಒಳಿತಿಗಾಗಿ ಯೋಚಿಸುತ್ತ ಶ್ರಮಿಸುವ ಒಬ್ಬ ಶೇಷ್ಠ ವಿಶ್ವ ನಾಯಕರ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು.
ನಮ್ಮ ದೇಶದ ಎಲ್ಲ ವರ್ಗಗಳವರನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುತ್ತಾರೆ. ಅಲ್ಲದೇ, ಅದರ ಫಲವನ್ನು ಪ್ರತೀ ನಾಗರಿಕನಿಗೂ ತಲುಪಿಸುವ ನಿಟ್ಟಿನಲ್ಲಿ ಸಕ್ರಿಯರಾಗುತ್ತಾರೆ ಎಂದು ಹೇಳಿದರು.
ಭಾರತ ಇದೇ ರೀತಿ ಅಭಿವೃದ್ಧಿ ಸಾಧಿಸಬೇಕಾದಲ್ಲಿ ನಾವು ಮತ್ತೆ ನರೇಂದ್ರ ಮೋದಿಯವರನ್ನೇ ಮತ್ತೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಬೇಕು ಎಂದು ಸಚಿವ ಜೋಶಿ ಕರೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಯಾಪುರಿ, ಮಾಜಿ ಮಹಾ ಪೌರ ವೆಂಕಟೇಶ್ ಮಿಸ್ತ್ರಿ, ಪ್ರಮುಖರಾದ ಮಲ್ಲಪ್ಪ ಹಳಕಟ್ಟಿ, ಭೀಮಾಶಿ ನೇಮಿಕಲ್, ಪ್ರಕಾಶ್ ಕ್ಯಾರಕಟ್ಟಿ, ಬಸವರಾಜ್ ವಡ್ಡರ್, ಪರಮೇಶ್ ಡಿ ವಡ್ಡರ್, ಮಂಜುನಾಥ್ ಹಿರೇಮಠ್ ಹಾಗು ಸಮಾಜದ ಪ್ರಮುಖರು, ಪಕ್ಷದ ಪ್ರಮುಖರು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.