ಹುಬ್ಬಳ್ಳಿ: ಪಕ್ಷದ ಚಟುವಟಿಕೆಯಿಂದ ದೂರವುಳಿದಿದ್ದ ನವಲಗುಂದ ಕ್ಷೇತ್ರದ ಮಾಜಿ ಶಾಸಕ,ಮಾಜಿ ಸಚಿವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಣ್ಣದಲ್ಲಿ ಗುರುತಿಸಿಕೊಂಡಿರುವ ಶಂಕರ ಪಾಟೀಲ ಮುನೇನಕೊಪ್ಪ, ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಜೊತೆ ಕಾಣಿಸಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯ
ಅಣ್ಣಿಗೇರಿಯಲ್ಲಿ ಖೇಲೋ ಇಂಡಿಯಾ ಯೋಜನೆಯಡಿ ನಿರ್ಮಿಸಲಾದ ಕ್ರೀಡಾ ಸಂಕೀರ್ಣದಲ್ಲಿ ಜೋಶಿ ಜೊತೆ ಶಂಕರ ಪಾಟೀಲ ಮುನೇನಕೊಪ್ಪ ಬ್ಯಾಡ್ಮಿಂಟನ್ ಆಡಿ ಗಮನ ಸೆಳೆದರು.
ಸಾಕಷ್ಟು ಬಿಡುವಿಲ್ಲದ ಸಮಯದಲ್ಲಿಯೋ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಕ್ರೀಡಾ ಪ್ರೋತ್ಸಾಹಿಸುವ ಮನೋಭಾವನೆ ಶ್ಲಾಘನೀಯ.
