ಕೊಪ್ಪಳ: ತಹಶೀಲ್ದಾರ್ ಎಂ.ಸಿದ್ದೇಶ್ ಅವರ ಜೀಪು ಚಾಲಕರಾದ ರಾಜಸಾಬ್ ಸೋಮವಾರ ನಿವೃತ್ತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದೇಶ್ ಅವರು ರಾಜಾಸಾಬ್ ಅವರನ್ನು ಜೀಪಿನಲ್ಲಿ ಕೂರಿಸಿ ಮನೆ ತನಕ ಕರೆದೊಯ್ದು ಗೌರವ ಸೂಚಿಸಿದ್ದಾರೆ.
1995 ರಿಂದ ಕುಷ್ಟಗಿ ತಹಶೀಲ್ದಾರರ ಜೀಪು ಚಾಲಕರಾಗಿದ್ದ ರಾಜಾಸಾಬ್ ಅವರು ಮೇ 31ರಂದು ಸೇವಾ ನಿವೃತ್ತಿ ಪಡೆದಿದ್ದಾರೆ. ಈ ವೇಳೆ ಅವರಿಗೆ ಸನ್ಮಾನಿಸಿ ಬೀಳ್ಕೊಡುವ ಜೊತೆಗೆ ತಹಶೀಲ್ದಾರ್ ಎಂ.ಸಿದ್ದೇಶ್ ಅವರು ಚಾಲಕನ ಸ್ಥಾನದಲ್ಲಿ ಕುಳಿತು, ನಿವೃತ್ತ ಚಾಲಕ ರಾಜಾ ಅವರನ್ನು ತಮ್ಮ ಸ್ಥಾನದಲ್ಲಿ ಕುಳ್ಳಿರಿಸಿಕೊಂಡು ಮನೆಗೆ ತಲುಪಿಸಿದ್ದಾರೆ.ಕಳೆದ 26 ವರ್ಷಗಳಿಂದ ತಹಶೀಲ್ದಾರ ಜೀಪ್ ಚಾಲಕರಾಗಿ ಸೇವೆ ಸಲ್ಲಿಸಿರುವ ಕರ್ತವ್ಯ ನಿಷ್ಠರು, ಸೌಮ್ಯ ಸ್ವಭಾವ, ಸಮಯ ಪ್ರಜ್ಞೆಯ ಕೆಲಸದಿಂದ ಕುಷ್ಟಗಿಯಲ್ಲಿ 30ಕ್ಕೂ ಹೆಚ್ಚು ತಹಶೀಲ್ದಾರರಿಗೆ ಇವರ ಸೇವೆ ಹಿಡಿಸಿತ್ತು. ಸರ್ಕಾರದ ನಿಯಮದಂತೆ ಅವರು, ಸೇವಾ ನಿವೃತ್ತಿ ಹೊಂದಿದ್ದು, ಅವರ ಸೇವೆಗೆ ತಹಶೀಲ್ದಾರ್ ಗೌರವ ಸೂಚಿಸಿದ್ದಾರೆ. ಇನ್ನು ಸಿದ್ದೇಶ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Check Also
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ
Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …