ಹುಬ್ಬಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಅಧಿಕಾರಾವಧಿ ಪೂರ್ಣ ಗೊಳಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ: ಸಚಿವ ಪ್ರಹ್ಲಾದ್ ಜೋಶಿನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರವಾಗಿ ಯಾರೂ ನನ್ನನ್ನು ಭೇಟಿ ಮಾಡಿಲ್ಲ. ನಾನು ಕೂಡ ಯಾರನ್ನೂ ಭೇಟಿ ಆಗಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಈಗಿರುವ ನಮ್ಮ ಉದ್ದೇಶ ಕೋವಿಡ್ ನಿಯಂತ್ರಣ ಮಾಡುವುದು. ನಾವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಕೊರೊನಾ ಸೋಂಕು ಮುಕ್ತಗೊಳಿಸುವ ಕೆಲಸ ಮಾಡಬೇಕಾಗಿದೆ ಎಂದರು.ಶಾಸಕರ ಭೇಟಿ ವಿಚಾರವಾಗಿ ಮಾತನಾಡಿದ ಅವರು, ನಾನು ಕೇಂದ್ರದ ಮಂತ್ರಿಯಾಗಿರುವುದರಿಂದ ಹುಬ್ಬಳ್ಳಿ ಅಥವಾ ದೆಹಲಿಯಲ್ಲಿದ್ದಾಗ ಅನೇಕ ನಾಯಕರು ಭೇಟಿ ಮಾಡುತ್ತಾರೆ. ಅವರೊಂದಿಗೆ ಕೇಂದ್ರದಲ್ಲಿ ಆಗಬೇಕಾಗಿರುವ ಕಾರ್ಯಗಳ ಚರ್ಚೆಗಳು ಬಿಟ್ಟರೆ ಬೇರೆ ಯಾವ ವಿಷಯಗಳ ಬಗ್ಗೆಯೂ ಈವರೆಗೆ ಪ್ರಸ್ತಾಪ ಆಗಿಲ್ಲ ಎಂದರು.ಬಿಜೆಪಿಯಲ್ಲಿ ಸಮರ್ಥರು ಯಾರಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ನಲ್ಲಿ ಸಮರ್ಥರು ಬಹಳ ಇದ್ದಾರೆಂದು ಬಡಿದಾಡುತ್ತಿದ್ದಾರೆ. ಅವರು ಹಾಗೆಯೇ ಇರಲಿ ಎಂದರು.
