ಹುಬ್ಬಳ್ಳಿ; ಕೋವೀಡ್ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫ್ರಂಟ್ ಲೈನ್ ಕರೋನ್ ವಾರಿಯರ್ಸ್ ಗಳ ಜವಾಬ್ದಾರಿ ಹೆಚ್ಚಾಗಿದ್ದು ಅವರಿಗೆ ಆಸರೆಗೆ ನವನಗರದ ಚೆನ್ನವೀರ ಶರಣರ ಮಹಿಳಾ ವೇದಿಕೆಯಿಂದ ಇಂದು ಸಿವಿಲ್ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಚೆನ್ನವೀರ ಶರಣರ ಮಹಿಳಾ ವೇದಿಕೆಯಿಂದ ‘ಉಮಾ ಜಂಗ್ಲಪ್ಪೆಗೌಡರ್, ಚಂದ್ರಿಕಾ ಬೇವೂರ್, ಮಧು ತೋಡುರ್ಕರ್, ಕಲ್ಮೇಶಿ, ಜಯರತ್ನಾ ಲಕ್ಕಿಮಠದ, ಲಲಿತಾ ಕಂಬಳಿಹಾಳ ಅವರ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು. ನಂತರ ಮಾತನಾಡಿದ, ಮಧು ತೋಡುರ್ಕರ್ ಇಂದು ಸಾಕಷ್ಟು ವಿಷಮ ಪರಿಸ್ಥಿತಿಯನ್ನು ನಾವು ಎದುರಿಸುತಿದ್ದೇವೆ. ಈ ಸಂದರ್ಭದಲ್ಲಿ ತಮ್ಮ ಜೀವ ದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಸಾ ಕಾರ್ಯಕರ್ತೆಯರಿಗೆ, ವೈದ್ಯರಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರು ಕಡಿಮೆ ಎಂದರು.
ವೈದ್ಯರಾದ ಡಾ.ಅರವಿಂದ ಶೆಟ್ಟಿ, ಆಶಾ ಕಾರ್ಯಕರ್ತೆಯರಾದ, ಪೂರ್ಣಿಮಾ ಮಠದ ರೂಪಶ್ರೀ ಜಾವೂರ್ ಅಂಜನಾ ಬೆಳ್ಳಾರಿ, ಮಂಜುಳಾ ಕಮ್ಮಾರ, ರೇಣುಕಾ ಹುಬ್ಬಳ್ಳಿ, ನಾಗರತ್ನ ವಾಲೀಕಾರ್, ಅಕ್ಕಮ್ಮ ನೆತ್ತಿ ಮುಂತಾದವರು ಉಪಸ್ಥಿತರಿದ್ದರು.
