ಹುಬ್ಬಳ್ಳಿ- ಐಷರ್ ಕ್ಯಾಂಟರ್ ಮತ್ತು ಟಾಟಾ ಏಸ್ ಡಿಕ್ಕಿ ಹೊಡೆದ ಪರಿಣಾಮ ಐಷರ್ ಕ್ಯಾಂಟರ್ ಸವಾರ ಗಂಭೀರ ಗಾಯವಾದ ಘಟನೆ ಹುಬ್ಬಳ್ಳಿಯ ನ್ಯಾಷನಲ್ ಹೈವೇ 4 ರ ಗಬ್ಬೂರ ಕ್ರಾಸ್ ಬಳಿ ತಡ ರಾತ್ರಿ ನಡೆದಿದೆ.ಸೂರತ್ ದಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಐಷರ್ ಕ್ಯಾಂಟರ್, ಮುಂದೆ ಹೋಗುತ್ತಿದ್ದ ಹುಬ್ಬಳ್ಳಿಯ ಟಾಟಾ ಏಸ್ ವಾಹನಕ್ಕೆ ಹಿಂಬದಿಯಿಂದ ಗುದ್ದಿದ ಪರಿಣಾಮ, ವಾಹನ ಸವಾರರಿಗೆ ಗಂಭೀರ ಗಾಯವಾಗಿದ್ದು, ಓರ್ವ ಸವಾರನನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ….
