Breaking News

ಮದ್ಯಪ್ರಿಯರಿಗೆ ಇದೊಂದು ಬೇಸರದ ಸಂಗತಿ- ಸಾರಾಯಿ ಬಾಟಲಿ ಸಾಲಾಗಿ ನಾಶ ಮಾಡಿದ ಪೊಲೀಸರು

Spread the love

ಆಂಧ್ರಪ್ರದೇಶ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡ ಆಂಧ್ರಪ್ರದೇಶದ ಕೃಷ್ಣ ಜಿಲ್ಲಾ ಪೊಲೀಸರು ಅವುಗಳನ್ನು ನಾಶಪಡಿಸಿದ್ದಾರೆ.
ಕೃಷ್ಣ ಜಿಲ್ಲೆಯ 33 ಪೊಲೀಸ್ ಠಾಣೆಗಳಲ್ಲಿ ದಾಖಲಾದ 800 ಪ್ರಕರಣಗಳ ಬೆನ್ನತ್ತಿದ ಪೊಲೀಸರು, ಪೊಲೀಸ್ ವರಿಷ್ಠಾಧಿಕಾರಿ ಎಂ.ರವೀಂದ್ರನಾಥ್ ಬಾಬು ಅವರ ನೇತೃತ್ವದಲ್ಲಿ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ 5,900 ಮದ್ಯದ ಬಾಟಲಿಗಳು ದೊರೆತಿವೆ.
ಇವುಗಳಲ್ಲಿ ಅನೇಕ ಬಾಟಲಿಗಳು ಅವಧಿ ಮೀರಿದ್ದಾಗಿದೆ ಹಾಗೂ ಸೋರಿಕೆಯಾಗುತ್ತಿದ್ದ ಬಾಟಲಿಗಳಾಗಿವೆ. ಹೀಗಾಗಿ ಇಂತಹ ಬಾಟಲಿಗಳನ್ನು ನಾಶ ಮಾಡಲಾಗಿದೆ. ರಾಜ್ಯದ ಗಡಿಯಲ್ಲಿರುವ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಅಕ್ರಮ ಮದ್ಯ ಉತ್ಪಾದನೆ ಮತ್ತು ಸಾಗಣೆ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಬಾಬಾ ಸಾಹೇಬರಿಗೆ ಅಪಮಾನ – ಬಹಿರಂಗ ಚರ್ಚೆಗೆ ಬೆಲ್ಲದ ಸವಾಲು: ಅರವಿಂದ ಬೆಲ್ಲದ

Spread the loveಹುಬ್ಬಳ್ಳಿ:ಅಮಿತ್ ಶಾ ಅವರು ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯನ್ನು ತಿರುಚಿ, ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಕಾಂಗ್ರೆಸ್ ಟೂಲ್‌ಕಿಟ್‌ನ …

Leave a Reply

error: Content is protected !!