ಹುಬ್ಬಳ್ಳಿ- ಕರೋನಾ ಟೆಸ್ಟ್‌ನಲ್ಲಿ ವಿನಾಕಾರಣ ವಿಳಂಬಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಶಾಸಕ ಪ್ರಸಾದ್ ಅಬ್ಬಯ್ಯಾ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಇಂದಿರಾ ಗಾಂದಿ ಗಾಜಿನ ಮನೆಯಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಕೋವೀಡ್ -೧೯ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಪರಿಶೀಲನಾ ಸಭೆಯಲ್ಲಿ ಮೊದಲು ಆರೋಗ್ಯ ಸಚಿವರು ಪಾಸಿಟಿವ್ ಕುರಿತಾದ ಅಂಕಿ ಅಂಶಗಳ ಕುರಿತು ಮಾಹಿತಿ ಕೇಳಿದಾಗ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಟೆಸ್ಟ್ಂಗ್ ನೋಡಿಕೊಳ್ಳುತಿದ್ದ ಅಧಿಕಾರ ವರದಿ ನೀಡುವಲ್ಲಿ ತಡಬಡಿಸಿದರು. ಈ ನಡುವೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ನಮ್ಮ ಕಚೇರಿ ಸಿಬ್ಬಂದಿ ವರದಿಯೇ ತಡವಾಗಿ ಬಂದಿತು. ಅದು 34 ವಯಸ್ಸಿನವರು ಸಾವನ್ನಪ್ಪುತ್ತಾರೆ 96 ವಯೋಮಾನದವರು ಚಿಕಿತ್ಸೆ ಪಡೆದು ಗುಣಮುಖರಾಗತ್ತಾರೆ ಎಂದರು. ಇದಕ್ಕೆ ಧ್ಬನಿ ಗುಡಿಸಿದ ಶಾಸಕ ಅಬ್ಬಯ್ಯಾ ಪ್ರಸಾದ ಸಹ ಈ ಟೆಸ್ಟ್ ದಲ್ಲಿ ವಿಳಂಬಕ್ಕೆ ಕಾರಣ ಕೇಳಿದರು. ನಂತರ ಆರೋಗ್ಯ ಸಚಿವರು ಈ ರೀತಿಯ ವಿಳಂಬವಾದರೆ ಸರಿಯಲ್ಲ ಎಂದು ತಾಕೀತು ಮಾಡಿದರು.
