ನವದೆಹಲಿ: ಮಾನವ ಕುಲಕ್ಕೆ ಕಂಠಕವಾಗಿರುವ ಕೋವೀಡ್
ವೈರಸ್ ಬರುವ ದಿನಗಳಲ್ಲಿ ಕೆಮ್ಮು ಮತ್ತು ನೆಗಡಿಯಂತೆ ಸಾಮಾನ್ಯವಾಗಿ ಉಳಿದು ಬಿಡಬಹುದು ಎಂದು ಶುಕ್ರವಾರ ಅಧ್ಯಯನವೊಂದು ತಿಳಿಸಿದೆ.
ವೈರಸ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆ ಮತ್ತು ಗಣಿತದ ಮಾದರಿ ಆಧರಿಸಿ ಈ ಮಾಹಿತಿ ಹೊರಬಿದ್ದಿದೆ. ಪ್ರಸ್ತುತ ಕೋವಿಡ್ ಸಾಂಕ್ರಾಮಿಕ ಕಾಲಾನಂತರದಲ್ಲಿ ನಮ್ಮ ದೇಹದಲ್ಲಿನ ಸ್ಥಿತಿಗತಿಗಳಲ್ಲೂ ಬದಲಾವಣೆ ಮಾಡುತ್ತದೆ ಎಂದು ತಿಳಿಸಿದೆ.ಇದಕ್ಕೆ ಸಂಬಂಧಿಸಿದಂತೆ ಅಮೆರಿಕದ ಯುಟಾ ವಿಶ್ವವಿದ್ಯಾಲಯದ ಗಣಿತ ಮತ್ತು ಜೈವಿಕ ವಿಜ್ಞಾನಗಳ ಪ್ರಾಧ್ಯಾಪಕ ಫ್ರೆಡ್ ಆಡ್ಲರ್ ಮಾತನಾಡಿದ್ದು, ಕೊರೊನಾ ಸಂಭವನೀಯ ಭವಿಷ್ಯದ ಬಗ್ಗೆ ತಿಳಿಸುತ್ತದೆ. ಆದರೆ, ಈಗಲೇ ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ. ಮುಂದಿನ ದಶಕದಲ್ಲಿ ಕೋವಿಡ್ ತೀವ್ರತೆ ಕಡಿಮೆಯಾ ಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವೈರಸ್ನಲ್ಲಿನ ಬದಲಾವಣೆಗಳಿಗಿಂತ ನಮ್ಮ ದೇಹದಲ್ಲಿನ ರೋಗನಿರೋಧಕ ಪ್ರಕ್ರಿಯೆ ಬದಲಾಗಲಿದ್ದು, ಕೋವಿಡ್ ಕೂಡ ನೆಗಡಿ, ಕೆಮ್ಮಿನ ರೀತಿ ಇರಲಿದೆ ಎಂದಿದ್ದಾರೆ. ಸಾರಾ- ಕೋವಿ-೨(SARS-COV-2 )ವೈರಸ್ ಕೂಡ ಕೊರೊನಾ ವೈರಸ್ನಂತೆ ಹರಡಿದರೂ, ಅದರಿಂದ ಮಾನವರಿಗೆ ಇದೀಗ ಅಪಾಯ ಕಡಿಮೆ. ಇದೇ ರೀತಿ ಮುಂದಿನ ದಿನಗಳಲ್ಲೂ ಕೋವಿಡ್ ಉಳಿದುಕೊಳ್ಳಲಿದೆ ಎಂದು ತಿಳಿದುಬಂದಿದೆ.
Check Also
ಧಾರವಾಡ ಲೋಕಸಭಾ ರಿಸಲ್ಟ್- ಇತಿಹಾಸ ಸೃಷ್ಟಿದ ಪ್ರಲ್ಹಾದ್ ಜೋಶಿ
Spread the loveಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಮಹತ್ವ ಇದೆ. ಕರ್ನಾಟಕ ಅಷ್ಟೇ ಅಲ್ಲಾ ದೇಶದ …