ಹುಬ್ಬಳ್ಳಿ; ತಮ್ಮ ಯೌವನದಲ್ಲಿ ಸಂಪತ್ತು ಮತ್ತು ಮೌಲ್ಯ ಸೃಷ್ಟಿಯ ಕಾರಣಕ್ಕಾಗಿ ಸಮಾಜಕ್ಕೆ ಕೊಡುಗೆ ನೀಡಿದ ಜೀವಂತ ಉದಾಹರಣೆಗಳು ಎನಿಸಿಕೊಂಡಿದ್ದಾರೆ ನಮ್ಮ ಸಮಾಜದ ಹಿರಿಯರು. ತಮ್ಮ ಮಕ್ಕಳಿಗಾಗಿ ಸಂಪೂರ್ಣ ಜೀವನ ಮತ್ತು ಸರ್ವಸ್ವವನ್ನೂ ತ್ಯಾಗ ಮಾಡಿದ ಈ ಹಿರಿಯ ಪೀಳಿಗೆಯನ್ನು ನಿರ್ಲಕ್ಷ್ಯದಿಂದ ನೋಡಲಾಗುತ್ತಿದೆ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ಬಿಜೆಪಿ ಮಹಿಳಾ ಮೂರ್ಚಾದ ಕಾರ್ಯದರ್ಶಿ ಮಧು ತೊರ್ಡುಕರ್ ಹೇಳಿದರು.
⊕
ನವನಗರದಲಿರುವ ವಿವೇಕಾನಂದ ವೃದ್ದರ ಆಶ್ರಮಕ್ಕೆ ಅಗತ್ಯವಾದ ಪ್ರೋಟೀನ್ ಪೌಡರ್ ಹಾಗೂ ಮಿಟಿಮಿನ್ ಮಾತ್ರೆ ವಿತರಣೆ ಮಾಡಿ ಮಾತನಾಡಿದರು.
ಚಿಕ್ಕೆನಕೊಪ್ಪದ ಅಂಧರ ಆಶ್ರಮದ ಕಾರ್ಯದರ್ಶಿಯಾದ ಚಂದ್ರಿಕಾ ಬೇವೂರ್ ಮಾತನಾಡಿ, ಮಾನವೀಯತೆ ಆಧಾರದ ಮೇಲೆ ಕೋವೀಡ್ ಸಮಯದಲ್ಲಿ ಮಾತ್ರೆ ನೀಡಲಾಯಿತು. ಅಂಧರ ಆಶ್ರಮದ ಪದಾಧಿಕಾರಿಗಳು ಮುಂತಾದವರಿದ್ದರು.