ಹುಬ್ಬಳ್ಳಿ: ತಾಯಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಕೋಪಗೊಂಡ ಮಗ, ರಾತ್ರೋ ರಾತ್ರಿ ತಾಯಿ ಆಶ್ರಯ ಪಡೆಯುತ್ತಿದ್ದ ಜೋಪಡಿಗೆ ಬೆಂಕಿ ಹಚ್ಚಿದ ಪ್ರಕರಣ ನಗರದ ಮಂಟೂರ ರಸ್ತೆಯ ಜೋಪಡಿ ಓಣಿಯಲ್ಲಿ ನಡೆದಿದೆ.ಸ್ಥಳೀಯ ನಿವಾಸಿ ಸತೀಶ ಗೋನಾ ಬೆಂಕಿ ಹಚ್ಚಿದ ಆರೋಪಿಯಾಗಿದ್ದು, ಶಹರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸತೀಶನು ತಾಯಿ ಜೊತೆ ಸದಾ ಜಗಳವಾಡುತ್ತಿದ್ದನು. ಅವರ ಮೇಲೆ ಹಲ್ಲೆ ನಡೆಸುತ್ತ, ಮಾನಸಿಕ ಕಿರುಕುಳ ನೀಡುತ್ತಿದ್ದನು. ಇದನ್ನು ಸಹಿಸಲಾಗದೆ ಅವರು, ಪರಿಚಯವಿದ್ದ ಮೇರಿ ದುಬಾಲ್ ಅವರ ಜೋಪಡಿಗೆ ಹೋಗಿ ಆಗಾಗ ವಿಶ್ರಾಂತಿ ಪಡೆಯುತ್ತಿದ್ದರು.ತಾಯಿಗೆ ನಿಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ನೀಡಬೇಡಿ’ ಎಂದು ಮೇರಿ ಮನೆಯವರಿಗೆ ಸತೀಶ ಆಗಾಗ ಬೆದರಿಕೆ ಹಾಕುತ್ತಿದ್ದನು. ಅದನ್ನೇ ಮನಸ್ಸಲ್ಲಿಟ್ಟುಕೊಂಡು ಬೆಂಕಿ ಹಚ್ಚಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಮಗನ ದೌರ್ಜನ್ಯ ತಾಳಲಾಗದೆ ತಾಯಿ ಆಗಾಗ ನಮ್ಮ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ಅದನ್ನು ಸಹಿಸಲಾಗದೆ ಅವನು, ನಾವು ಮಲಗಿದ್ದಾಗ ರಾತ್ರಿ ವೇಳೆ ಪೆಟ್ರೋಲ್ ಸುರಿದು ಜೋಪಡಿಗೆ ಬೆಂಕಿ ಹಚ್ಚಿದ್ದಾನೆ. ಜೋಪಡಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ನಾವು ಪ್ರಾಣಾಪಾಯದಿಂದ ಪಾರಾಗಿದ್ದೇವೆ. ಸೋಫಾ, ಬಟ್ಟೆ ಹಾಗೂ ದಿನೋಪಯೋಗಿ ಪ್ಲಾಸ್ಟಿಕ್ ಸಾಮಗ್ರಿಗಳು ಸುಟ್ಟು ಹೋಗಿವೆ. ಅಂದಾಜು ₹50 ಸಾವಿರ ನಷ್ಟವಾಗಿದೆ’ ಎಂದು ಜೋಪಡಿ ಮನೆ ಮಾಲೀಕ ಫ್ರಾಂಚೀಸ್ ದುಬಾಲ್ ತಿಳಿಸಿದ್ದಾರೆ.
Check Also
ಬಾಬಾ ಸಾಹೇಬರಿಗೆ ಅಪಮಾನ – ಬಹಿರಂಗ ಚರ್ಚೆಗೆ ಬೆಲ್ಲದ ಸವಾಲು: ಅರವಿಂದ ಬೆಲ್ಲದ
Spread the loveಹುಬ್ಬಳ್ಳಿ:ಅಮಿತ್ ಶಾ ಅವರು ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯನ್ನು ತಿರುಚಿ, ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಕಾಂಗ್ರೆಸ್ ಟೂಲ್‌ಕಿಟ್‌ನ …