ಅಪ್ರಾಪ್ರ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಆರೋಪಗಳ ಬಂಧನಕ್ಕೆ ಆಗ್ರಹಿಸಿ ಮನವಿ

Spread the love

ಹುಬ್ಬಳ್ಳಿ- ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಅರಾಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿದವರನ್ನು ಬಂಧನಕ್ಕೆ ಆಗ್ರಹಿಸಿ ಮಂಗಳವಾರ ಹುಬ್ಬಳ್ಳಿ ತಹಸೀಲ್ದಾರ ಮೂಲಕ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಅರಾಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅದೇ ಗ್ರಾಮದ ಕೆಲವು ಯುವಕರು ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಸಿಂದಗಿ ತಾಲೂಕು ಯಂಕಂಚಿ ಗ್ರಾಮದ ವಸತಿ ಗೃಹದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿ ನಂತರ ಪರಾರಿಯಾಗಿದ್ದರು. ಪರಾರಿಯಾದ ದುಷ್ಕರ್ಮಿಗಳನ್ನು ಪೋಕ್ಸೋ ಕಾನೂನು ಅಡಿ ಬಂಧಿಸುವಂತೆ ಯಾದಗಿರಿ ಎಸ್ ಪಿ ಅವರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಲಾಯಿತು.
ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮುಖಂಡರಾದ
ಫಕ್ಕೀರಪ್ಪ ಭೂಸದ, ಪ್ರಧಾನ ಕಾರ್ಯದರ್ಶಿಯ ಶಿವ ಶಂಕರ ಕಂಠಿ, ಜಂಟಿ ಕಾರ್ಯದರ್ಶಿ
ಲಿಂಗರಾಜ ಧಾರವಾಡಶೆಟ್ಟರ,
ಕಾರ್ಯದರ್ಶಿ ಮಲ್ಲಿಕಾರ್ಜುನ ಶಿರಗುಪ್ಪಿ,ಮುಂತಾದರಿದ್ದರು.


Spread the love

About gcsteam

    Check Also

    ಸ್ವಾತಂತ್ರ್ಯದ ಸ್ವಾತಂತ್ರ್ಯ ಉಸಿರಾಟ ಮಾಡುತಿದ್ದರೆ ಕಾಂಗ್ರೆಸ್ ಕಾರಣ- ಸಿದ್ದರಾಮಯ್ಯಾ

    Spread the loveಇಂದು ನಮಗೆ ಸಿಕ್ಕಿದ್ದರೆ, ಸ್ವಾತಂತ್ರ್ಯದ ಫಲವನ್ನ ,ಸ್ವಾತಂತ್ರ್ಯ ಉಸಿರಾಟವನ್ನು ಉಸಿರಾಟ ಮಾಡುತಿದ್ದರೆ ಇದಕ್ಕೆ ಕಾಂಗ್ರೆಸ್ ಪಕ್ಷ ವೇ …

    Leave a Reply