Breaking News

ಕರ್ನಾಟಕದಲ್ಲಿ ಪಾಸಿಟಿವ್ ಪ್ರಮಾಣ ಶೇಕಡಾ 39.7ಕ್ಕೆ ಏರಿಕೆ

Spread the love

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ರಾಜ್ಯವನ್ನು ಬೆಚ್ಚಿ ಬೀಳಿಸುವಂತಿವೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ರೇಟ್‌ ಏರಿಕೆ ಯಾಗುತಿದೆ. ಲಾಕ್‌ಡೌನ್‌ನಿಂದ ಮೇಲ್ನೋಟಕ್ಕೆ ಸೋಂಕು ಕಡಿಮೆಯಾದಂತೆ ಕಂಡರೂ ಪಾಸಿಟಿವ್ ರೇಟ್ ಮಾತ್ರ ಹೆಚ್ಚಾಗುತ್ತಲೇ ಇದೆ.
ಸೋಮವಾರ ಒಟ್ಟು 38,603 ಮಂದಿಗೆ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಪಾಸಿಟಿವ್ ರೇಟ್ ದಾಖಲೆಯ ಶೇ.39.7ಕ್ಕೆ ಏರಿಕೆಯಾಗಿದೆ.ಅಂದ್ರೆ ಪ್ರತಿ 100 ಜನರನ್ನು ಟೆಸ್ಟ್ ಮಾಡಿದರೆ ಸರಾಸರಿ 40 ಜನರಿಗೆ ಪಾಸಿಟಿವ್ ಬರುವ ಸಾಧ್ಯತೆ ಇದೆ. ಇಷ್ಟು ದಿನ ನಗರ, ಜೆಲ್ಲೆ, ತಾಲೂಕುಗಳಲ್ಲಿ ಆರ್ಭಟಿಸುತ್ತಿದ್ದ ಕೊರೊನಾ‌ ಸೋಂಕು‌ ಇದೀಗ ಈ ಎಲ್ಲವನ್ನೂ ದಾಟಿ ಹಳ್ಳಿ ಹಳ್ಳಿಗೂ ವ್ಯಾಪಿಸಿ ಜನರ ನಿದ್ದೆಗೆಡಿಸಿದೆ. ಸೋಮವಾರ ರಾಜ್ಯದಲ್ಲಿ 97 ಸಾವಿರ ಮಂದಿ ಕೋವಿಡ್ ಟೆಸ್ಟ್ ಮಾಡಿಸಿದರೆ, ಇವರಲ್ಲಿ 38 ಸಾವಿರ‌ಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ಸಾವಿನ ಪ್ರಕರಣಗಳು ಕೂಡ ಹೆಚ್ಚಾಗಿವೆ. ರಾಜ್ಯದಲ್ಲಿ ಒಟ್ಟು ಸೋಮವಾರ 476 ಜನ ಮರಣ‌‌ ಹೊಂದಿದ್ದು, ಬೆಂಗಳೂರೊಂದರಲ್ಲೇ 239 ಮಂದಿ‌ ಬಲಿಯಾಗಿದ್ದಾರೆ.


Spread the love

About Karnataka Junction

[ajax_load_more]

Check Also

ಜವಳಿ ಉದ್ಯಮ ಉತ್ತೇಜನಕ್ಕೆ ಬದ್ಧ- ಶಾಸಕ ಅಬ್ಬಯ್ಯಾ ಪ್ರಸಾದ್

Spread the loveಹೊಲಿಗೆ ಯಂತ್ರಗಳ ಉಚಿತ ವಿತರಣೆ ಕಾರ್ಯಕ್ರಮ ಹುಬ್ಬಳ್ಳಿ: ‘ವೀರಶೈವ ಲಿಂಗಾಯತ ಶಿವಶಿಂಪಿ ಸಮಾಜದವರು ಕುಲಕಸುಬನ್ನು ಉಳಿಸಿಕೊಂಡು, ಜವಳಿ …

Leave a Reply

error: Content is protected !!