ಹುಬ್ಬಳ್ಳಿ- ನಗರದ ಮಲಬಾರ್ ಗೋಲ್ಡ್ ಮುಖ್ಯ
ಶಶಾಂಕ್ ಮೋಹನ ಏಕಬೋಟೆ (37) ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೋವೀಡ್ ಗೆ ಮಂಗಳವಾರ ಬಲಿಯಾಗಿದ್ದಾರೆ.
ಶಶಾಂಕ್ ಮೋಹನ ಏಕಬೋಟೆ ತುಂಬಾ ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದು, ಮಲಬಾರ್ ಗೋಲ್ಡ್ ನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಣೆ ಜನಪರ ಕಾಳಜಿವುಳ್ಳವರಾಗಿದ್ದರು. ಮಲಬಾರ್ ಗೋಲ್ಡ್ ಸಿಬ್ಬಂದಿಯ ಜೊತೆ ತುಂಬಾ ನಗುಮುಖದಿಂದ ಕೆಲಸ ಮಾಡುತ್ತಿದ್ದರು. ಹುಬ್ಬಳ್ಳಿ ಧಾರವಾಡ ಸೇರಿದಂತೆ ಎಲ್ಲ ಕಡೆಗಳಲ್ಲಿ ಬಡ ಕಲಾವಿದರಿಗೆ ಆಹಾರ ಧಾನ್ಯಗಳ ವಿತರಣೆ ಮಾಡಿದ್ದರು. ಮೃತರ ತಂದೆ ಮಾಜಿ ಮಹಾಪೌರ ಮೋಹನ್ ಏಕಬೋಟೆ ಕಳೆದ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದರು. ತೀರಿಕೊಂಡಿದ್ದರು. ಮೃತರು ತಾಯಿ, ಪತ್ನಿ, ಒಬ್ಬ ಸಹೋದರಿ ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
