ಹುಬ್ಬಳ್ಳಿ; ರುಂಡ-ಮುಂಡ ಬೇರ್ಪಡಿಸಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣ ಸಂಬಂಧಿಸಿದಂತೆ ಈಗ ಏನು ಹೇಳಲು ಅಗಲ್ಲ ತನಿಖಾ ಹಂತದಲ್ಲಿದ್ದು ತನಿಖೆ ಮುಗಿದ ಕೂಡಲೇ ಎಲ್ಲವನ್ನೂ ಹೇಳುತ್ತೇನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಹೇಳಿದರು.ನಗರದ ಮಿನಿವಿಧಾನ ಮೇಲುಗಡೆಯಿರುವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಈಗಾಗಲೇಭೇದಿಸಲಾಗಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಹುಬ್ಬಳ್ಳಿ ಮೂಲದ ನಿಯಾಜಹ್ಮದ ಕಟಿಗಾರ(21), ತೌಸೀಪ್ ಚನ್ನಾಪೂರ(21), ಅಲ್ತಾಫ್ ಮುಲ್ಲಾ(24), ಅಮನ ಗಿರಣಿವಾಲೆ(19) ಬಂಧಿತ ಆರೋಪಿಗಳಾಗಿದ್ದಾರೆ. ಏ. 10ರಂದು ಈ ಪ್ರಕರಣ ದಾಖಲಾಗಿದ್ದು, ವಾರದಲ್ಲಿಯೇ ಪ್ರಕರಣ ಭೇದಿಸಿದ್ದೇವೆ.ರಾಕೇಶ್ ಕಠಾರೆ(33) ಎಂಬ ವ್ಯಕ್ತಿಯನ್ನು ನಾಲ್ವರು ಕೊಲೆಗೈದು, ಶವವನ್ನು ಸುಟ್ಟು ಹಾಕಿ, ಅಂಗಾಗ ಬೇರ್ಪಡಿಸಿ ಬೇರೆ ಬೇರೆ ಜಾಗಗಳಲ್ಲಿ ಎಸೆದು ತಲೆಮರೆಸಿಕೊಂಡಿದ್ದರು. ನಿಯಾಜಹ್ಮದ ಕಟಿಗಾರ ರಾಕೇಶ್‌ನ ತಂಗಿಯನ್ನು ಪ್ರೀತಿಸಿದ್ದು, ಅದಕ್ಕೆ ರಾಕೇಶ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕೊಲೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದರು.ಆದರೆ ಈಗ ಯುವತಿ ಹಾಗೂ ಕೊಲೆಯಾದ ರಾಕೇಶ್ ಬಗ್ಗೆ ಸಹ ಮಾಹಿತಿ ಕಲೆಹಾಕುತಿದ್ದೇವೆ ಎಂದರು.