Breaking News

ನವಲಗುಂದ ಒಂದು ವಾರ ಮಾರುಕಟ್ಟೆ ಸಂಪೂರ್ಣ ಬಂದ್ ಕೊರೊನಾ ಹಿನ್ನಲೆ

Spread the love

ಹುಬ್ಬಳ್ಳಿ; ನವಲಗುಂದ ಪಟ್ಟಣದಲ್ಲಿ
ದಿನದಿಂದ ದಿನಕ್ಕೆ ಕೊರೊನಾ ಮಾಹಾಮಾರಿ ಅಟ್ಟಹಾಸ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರ ಕಾಲ್ ಸಂಪೂರ್ಣ ಮಾರುಕಟ್ಟೆ ವ್ಯಾಪಾರ ಸ್ಥಗಿತ ಮಾಡಲು ತಾಲೂಕು ಪಂಚಾಯತ ಹಾಗೂ ಪುರಸಭೆಯಿಂದ ನಿರ್ಧಾರ ಮಾಡಿತು.
ಮಂಗಳವಾರದಂದು ಪಟ್ಟಣದ ತಾಲೂಕಿನ ಪಂಚಾಯತ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಯಿತು. ದಿನದಂದ ದಿನಕ್ಕೆ ಮಾರುಕಟ್ಟೆಯಲ್ಲಿ
ಜನ ಮಾತ್ರ ದೊಡ್ಡ ಪ್ರಮಾಣದಲ್ಲಿ ಸೇರುತಿದ್ದಾರೆ. ಅಗತ್ಯ ವಸ್ತು ಬಿಟ್ಟು ಅನಗತ್ಯವಾಗಿ ನವಲಗುಂದ ತರಕಾರಿ ದಿನಸಿ ಮಾರುಕಟ್ಟೆಯಲ್ಲಿ ಜನಜಂಗುಳಿ ನಿತ್ಯ‌ ಸಾಮಾನ್ಯವಾಗಿ ಹೋಗಿದೆ. ತರಕಾರಿ ಖರೀದಿಗೆ ಜನ್ರು ಮುಗಿಬಿಳ್ತಿರೋದು ಇನ್ನೂ ತಪ್ಪುತ್ತಿಲ್ಲ. ಪಟ್ಟಣದ ಹೃದಯ ಭಾಗದ ಮಾರುಕಟ್ಟೆಯಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಅದೆಷ್ಟೆ ಹೇಳಿದ್ರೂ ಜನ ಮಾತ್ರ ಡೋಂಟ್ ಕೇರ್. ಪೊಲಿಸ್ ಸಿಬ್ಬಂದಿ ಹಾಗೂ ಪರಸಭೆ ಸಿಬ್ಬಂದಿ ಸ್ಥಳದಲ್ಲಿದ್ದಾಗ ಮಾತ್ರ ಜನ ನಿಯಮ‌ ಪಾಲಿಸುವದನ್ನ ಬಿಟ್ರೆ ಮತ್ತೇ ಅದೇ ಚಾಳಿ ಮುಂದುವರೆಸ್ತಾರೆ. ಕೋವಿಡ್ ನಿಯಮ ಗಾಳಿ ತೂರಿ ಜನ ವ್ಯಾಪಾರ ನಡೆಸುತ್ತಿದ್ದು ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಮಾಯವಾಗಿದೆ. ಕೊರೋನಾ ಮರೆತು ತರಕಾರಿ ಖರೀದಿಯಲ್ಲಿ ಜನರು ಬ್ಯೂಸಿಯಾಗಿದ್ದಾರೆ. ಆದ್ರೆ ಜನ್ರ ಬೇಜವಾಬ್ದಾರಿತನಕ್ಕೆ ದಿನೇ ದಿನೇ ನಿಯಮ ಹೇಳ್ತಿರೋ ಅಧಿಕಾರಿಗಳು ಜನ್ರ ವರ್ತನೆಗೆ ಹೈರಾಣಾಗಿದ್ದಾರೆ. ಇದನ್ನು ಮನಗಂಡು ಇಂದು ತಾಲೂಕಾ ಪಂಚಾಯತ ಸಭಾ ಭವನದಲ್ಲಿ ನೆಡೆದ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರ ಸಭೆಯಲ್ಲಿ ಗುರುವಾರದಿಂದ ಒಂದು ವಾರ ಸಂಪೂರ್ಣ ನವಲಗುಂದ ನಗರ ಹಾಗೂ ಗ್ರಾಮದಲ್ಲಿ ಬಂದ್ ಮಾಡಲು ತೀರ್ಮಾನಕ್ಕೆ ಬರಲಾಯಿತು. ತಹಶಿಲ್ದಾರರ ನವೀನ ಹುಲ್ಲೂರ ಮಾತನಾಡಿ ಜಿಲ್ಲೆಯಲ್ಲಿ ನವಲಗುಂದ ತಾಲೂಕು ಹೆಚ್ಚು ಇರುವುದರಿಂದ ನಾಗರೀಕರು ಸಹಕಸಬೇಕು ಎಂದರು. ಸಭೆಯಲ್ಲಿ ಅಧಿಕಾರಿಗಳಾದ ಸಿ ಪಿ ಆಯ್ ಜಿ ಸಿ ಮಠಪತಿ, ಪುರಸಭಾ ಅಧ್ಯಕ್ಷ ಮಂಜು ಜಾಧವ , ಮುಖ್ಯಾಧಿಕಾರಿ ಎನ್ ಎಚ್ ಖುದಸವಂದ ,ಪಿ ಎಸ್ ಐ ಜಯಪಾಲ ಪಾಟೀಲ , ವ್ಯಾಪಾರಸ್ಥರಾದ ಅಣ್ಣಪ್ಪ ಬಾಗಿ ಆರ್ ಎನ್ ಧಾರವಾಡ, ಲೋಕನಾಥ ಹೆಬಸೂರ, ಆರ್ ಬಿ ಬೆಳವಟಗಿ , ಅಜಿತ ಆನೇಗುಂದಿ, ಮಲ್ಲಪ್ಪ ಬೇಂಡಿಗೇರಿ ,ಇರ್ಪಾನ್ ಬಾಗವಾನ್, ಕೃಷ್ಣ ಬೆಂಡಿಗೇರಿ, ಅನಂತ ಕಿರಾಣಿ, ಲಾಜಿದ ಜೀಂದಿ , ಶ್ರೀಕಾಂತ ಕುಲಕರ್ಣಿ, ಜಮಾಲ್ ಜಿಗಳೂರ ಉಪಸ್ಥಿತರಿದ್ದರು.


Spread the love

About Karnataka Junction

    Check Also

    ಪಕ್ಷೇತರ ಅಭ್ಯರ್ಥಿ ಜಿ ಜಿ ದ್ಯಾವನಗೌಡ್ರ ಕಣದಲ್ಲಿ ಮುಂದುವರೆಯಲು ನಿರ್ಧಾರ ?

    Spread the loveಹುಬ್ಬಳ್ಳಿ: .ಶಿಗ್ಗಾವ ಸವಣೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆದಿದ್ದು ಯಾವುದೇ …

    Leave a Reply

    error: Content is protected !!