ಹುಬ್ಬಳ್ಳಿ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಿದೇಶದಿಂದ ತರಿಸಿಕೊಂಡಿರುವ ದ್ರವೀಕೃತ ವೈದ್ಯಕೀಯ ಆಮ್ಲಜನಕದ ಸುಮಾರು 25 ಮೆಟ್ರಿಕ್ ಟನ್ ಸಾಮರ್ಥ್ಯದ ಮೂರು ಟ್ಯಾಂಕರ್‌ಗಳು ಶೀಘ್ರವೇ ಹುಬ್ಬಳ್ಳಿಗೆ ಆಗಮಿಸುತ್ತಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜಯಶಂಕರ ಹಾಗೂ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಆಕ್ಸಿಜನ್ ವ್ಯವಸ್ಥೆಗೆ ಕೋರಲಾಗಿತ್ತು.
ತಮ್ಮ ಕೋರಿಕೆ ಮೇರೆಗೆ ಇಬ್ಬರು ಸಚಿವರು ಆಕ್ಸಿಜನ್ ವ್ಯವಸ್ಥೆ ಮಾಡಿದ್ದು, ವಿದೇಶದಿಂದ 25 ಮೆಟ್ರಿಕ್ ಟನ್ ಸಾಮರ್ಥ್ಯದ ಮೂರು ಟ್ಯಾಂಕರ್‌ಗಳು ಶನಿವಾರ ನವೀ ಮುಂಬೈಗೆ ಬಂದು ತಲುಪಿದ್ದು, ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ಆಗಮಿಸಲಿವೆ.
ಮೂರೂ ಟ್ಯಾಂಕರ್ ಗಳಲ್ಲಿ ಒಟ್ಟು 75 ಮೆಟ್ರಿಕ್ ಟನ್‌ನಷ್ಟು ಆಕ್ಸಿಜನ್ ಬರಲಿದ್ದು, ಇದರಲ್ಲಿ ಧಾರವಾಡ ಜಿಲ್ಲಾಸ್ಪತ್ರೆಗಳಿಗೆ 25 ಮೆಟ್ರಿಕ್ ಟನ್, ಹಾವೇರಿ, ಗದಗ ಜಿಲ್ಲೆಗಳಿಗೆ 25 ಮೆಟ್ರಿಕ್ ಟನ್ ಹಾಗೂ ಬೆಳಗಾವಿ ಜಿಲ್ಲೆಗೆ 25 ಮೆಟ್ರಿಕ್ ಟನ್ ಬಳಕೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
Check Also
ಹೆಣ್ಣು ಮಕ್ಕಳೇ ಸ್ಟಾಂಗು ಗುರು ಕಾರ್ಯಕ್ರಮ ಸ್ಟಾರ್ ಸುವರ್ಣ ಚಾಲನೆ
Spread the loveಹುಬ್ಬಳ್ಳಿ: ನಗರದ ವಿನೂತನ ಪೌಂಡೇಶನ್ ಹುಬ್ಬಳ್ಳಿ ಅಧ್ಯಕ್ಷರು ಅಕ್ಕಮ್ಮಾ ಕಂಬಳಿ ಮುಂತಾದವರ ನೇತೃತ್ವದಲ್ಲಿ ಹೆಣ್ಣು ಮಕ್ಕಳೇ ಸ್ಟಾಂಗು …