ಹುಬ್ಬಳ್ಳಿ: .ಕರಾವಳಿಯ ಭಾಗದಲ್ಲಿ ವಾಯುಭಾರ ಕುಸಿತ ಕಂಡ ಹಿನ್ನೆಲೆಯಲ್ಲಿ
ವಾಣಿಜ್ಯ ನಗರಿ ಹುಬ್ಬಳ್ಳಿಗೆ ಸಹ ತೌಕ್ತೆ ಚಂಡಮಾರುತ ಎಂಟ್ರಿ ಕೊಟಿದೆ. ಶನಿವಾರ ತಡರಾತ್ರಿಯಿಂದ ಬಾರೀ ಮಳೆ ಸುರಿದಿದ್ದು ಭಾನುವಾರ ಸಹ ಬೆಳಿಗ್ಗೆಯಿಂದ ಹುಬ್ಬಳ್ಳಿಯಲ್ಲಿ ಮಳೆಯಾಗುತ್ತಿದೆ. ಗಾಳಿಯೂ ಜೋರಾಗಿದೆ.
ತೌಕ್ತೆ ಚಂಡಮಾರುತದ ಪರಿಣಾಮ ಮಳೆಯಾಗುತ್ತಿದೆ. ಸಂಜೆಯವರೆಗೂ ಇದೇ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆಯಷ್ಟೇ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಮಳೆಯಿಂದಾಗಿ ಖರೀದಿಗೆ ಅಡ್ಡಿಯಾಗಿದೆ.
