ಚಿಕ್ಕೋಡಿ : ಕೊರೊನಾ ಎಂಬ ಮಹಾಮಾರಿ ವೇಗದ ಗತಿಯಲ್ಲಿ ಏರುತ್ತಿರುವ ಎರಡನೇ ಅಲೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಲ್ಲಿ 22 ಜನ ಶಿಕ್ಷಕರು ಬಲಿಯಾಗಿದ್ದಾರೆ ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕ್ಕೇರಿ ತಿಳಿಸಿದ್ದಾರೆ.
ಕಳೆದ ಬಾರಿ ಕೊರೊನಾ ಮಹಾಮಾರಿಗೆ 18 ಜನ ಶಿಕ್ಷಕರು ಬಲಿಯಾಗಿದ್ದು, ಎರಡನೇ ಅಲೆಯಲ್ಲಿ ಕೇವಲ ಹದಿನೈದು ದಿನಗಳಲ್ಲಿ 22 ಜನ ಶಿಕ್ಷಕರು ಮೃತಪಟ್ಟಿದ್ದಾರೆ.ಈ ಪೈಕಿ 18 ಜನ ಸರ್ಕಾರಿ ಮತ್ತು ನಾಲ್ವರು ಅನುದಾನಿತ ಶಾಲೆಯ ಶಿಕ್ಷಕರಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಈವರೆಗೆ ಕೊರೊನಾಗೆ ಒಟ್ಟು 40 ಜನ ಶಿಕ್ಷಕರು ಬಲಿಯಾದಂತಾಗಿದೆ.ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
