Breaking News

ಬ್ಲ್ಯಾಕ್‌ ಫಂಗಸ್‌ ಗೆ 52 ಜನರು ಸಾವು-ಕರೋನಾಕ್ಕಿಂತ ಡೆಂಜರ್ ಇದು

Spread the love

ಮುಂಬೈ: ಕೋವಿಡ್‌-19 ತೀವ್ರಗೊಂಡಿರುವ ನಡುವೆಯೇ ಬ್ಲ್ಯಾಕ್‌ ಫಂಗಸ್‌ (ಶಿಲೀಂಧ್ರ ಸೋಂಕಿನ ಮುಕಾರ್ಮೈಕೋಸಿಸ್) ಹಾವಳಿ ಉಲ್ಬಣಗೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಈ ಹೊಸ ರೋಗಕ್ಕೆ 52 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚು ಕಾಲ ಆಸ್ಪತ್ರೆಗಳಲ್ಲಿ ಉಳಿಯುವ ಕೋವಿಡ್‌ ಸೋಂಕಿತರು ಹಾಗೂ ಸೋಂಕಿನಿಂದ ಗುಣಮುಖರಾಗಿ ಮಾಲಿನ್ಯಯುತ ಪರಿಸರದಲ್ಲಿ ವಾಸ ಮಾಡುವವರಿಗೆ ಈ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮಹಾರಾಷ್ಟ್ರದಲ್ಲಿ ಇಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ಈವರೆಗೂ 52 ಮಂದಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ರೋಗಿಗಳಲ್ಲಿ ಅತೀವ್ರ ಜ್ವರ, ಕಣ್ಣಿನ ನೋವು, ಮೂಗು ಕಟ್ಟುವುದು, ಕಣ್ಣಿನ ದೃಷ್ಟಿ ಮಂದವಾಗುವುದು ಇಲ್ಲವೇ ಭಾಗಶಃ ನಷ್ಟಗೊಂಡಿರುವ ಲಕ್ಷಣಗಳು ಕಂಡುಬಂದಿವೆ.ಮೃತಪಟ್ಟಿರುವ ಈ 52 ಮಂದಿಯೂ ಕೊರೋನಾ ಸೋಂಕಿಗೊಳಗಾಗಿ ಚೇತರಿಸಿಕೊಂಡವರೇ ಆಗಿದ್ದರೆಂದು ತಿಳಿದು ಬಂದಿದೆ. ಸದ್ಯ ರಾಜ್ಯದಲ್ಲಿ 1,500 ಶಿಲೀಂಧ್ರ ಸೋಂಕಿನ ಪ್ರಕರಣಗಳಿವೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ತಿಳಿಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಈಗಾಗಲೇ 1 ಲಕ್ಷ ಡೋಸ್ ಗಳ ಆಂಫೊಟೆರಿಸಿನ್ ಬಿ ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರ ಮೇಲೆ ಈದು ಅತ್ಯಂತ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಟೊಪೆ ತಿಳಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು

Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …

Leave a Reply

error: Content is protected !!