ಹಾವೇರಿ: ಕೊರೊನಾ ಸೋಂಕಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿರೋ ಕೋವಿಡ್-19 ವಾರ್ಡ್ನಲ್ಲಿ ನಡೆದಿದೆ.
ರಾಣೆಬೆನ್ನೂರು ಮೂಲದ 70 ವರ್ಷದ ವೃದ್ಧ ಲುಂಗಿಯಿಂದ ಬೆಡ್ನ ರಾಡ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಾರ್ಡ್ನಲ್ಲಿ ಎಲ್ಲರೂ ಮಲಗಿರುವುದನ್ನ ಗಮನಿಸಿದ ವೃದ್ಧ ಬೆಳಗಿನ ಜಾವ ಮೂರೂವರೆ ಗಂಟೆ ವೇಳೆಗೆ ನೇಣಿಗೆ ಶರಣಾಗಿದ್ದಾನೆ. ಆಸ್ಪತ್ರೆಗೆ ನಗರ ಠಾಣೆ ಸಿಪಿಐ ಪ್ರಹ್ಲಾದ ಚನ್ನಗಿರಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ
Check Also
ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ
Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …