Breaking News

ಅರಬ್ಬಿ ಸಮುದ್ರಲ್ಲಿ ವಾಯುಭಾರ ಕುಸಿತ- ಕರ್ನಾಟಕಕ್ಕೆ ಮೇ. 16 ಕ್ಕೆ ಎಂಟ್ರಿ ಸಾಧ್ಯತೆ

Spread the love

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು ‘ತೌಕ್ತೆ’ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ. ಮೇ 16 ರ ವೇಳೆಗೆ ಕರ್ನಾಟಕ ಸೇರಿದಂತೆ ಗೋವಾ, ದಕ್ಷಿಣ ಕೊಂಕಣ, ಗುಜರಾತ್‌‌ ಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಅರಬ್ಬಿ ಸಮುದ್ರದ ಆಗ್ನೇಯ ಭಾಗ ಮತ್ತು ಲಕ್ಷದ್ವೀಪ ಪ್ರದೇಶದ ಮೇಲೆ ಇಂದು ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದೆ. ಈ ಭಾಗದಲ್ಲಿ ಮುಂದಿನ 24 ತಾಸಿನಲ್ಲಿ ಮತ್ತಷ್ಟು ತೀವ್ರತೆಯ ಚಂಡಮಾರುತ ರೂಪುಗೊಳ್ಳಲಿದೆ ಎಂದು ಇಲಾಖೆ ಹೇಳಿದೆ.ಶನಿವಾರ ಬೆಳಿಗ್ಗೆ ಅದೇ ಪ್ರದೇಶದಲ್ಲಿ ತನ್ನ ತೀವ್ರತೆಯಲ್ಲಿ ಕೇಂದ್ರೀಕರಿಸಲಿದ್ದು ನಂತರದ 24 ಗಂಟೆಗಳ ಅವಧಿಯಲ್ಲಿ ಚಂಡಮಾರುತ ವೇಗ ಪಡೆಯುತ್ತದೆ. ಪರಿಣಾಮ, ಕರ್ನಾಟಕ ಮತ್ತು ಕೇರಳದ ಕರಾವಳಿ ತೀರ, ಗೋವಾ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪದ ಹಲವು ಪ್ರದೇಶಗಳಲ್ಲಿ ಜೋರು ಮಳೆಯಾಗುವ ನಿರೀಕ್ಷೆಯಿದೆ.ಚಂಡಮಾರುತ ಅಪ್ಪಳಿಸುವುದಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ರಕ್ಷಣಾ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್‌ ತಂಡಗಳನ್ನು ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ಕಳುಹಿಸಿಕೊಡಲಾಗಿದೆ. ಈ ನಿಟ್ಟಿನಲ್ಲಿ 29 ರಕ್ಷಣಾ ತಂಡಗಳು ಸಿದ್ಧವಾಗಿವೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆದ ಡಿಜಿ, ಎಸ್.ಎನ್. ಪ್ರಧಾನ್ ಹೇಳಿದ್ದಾರೆ.ಇದು 2021ನೇ ಸಾಲಿನ ಮೊದಲ ಚಂಡಮಾರುತವಾಗಿದ್ದು, ಮ್ಯಾನ್ಮಾರ್‌ ‘ತೌಕ್ತೆ’ ಎಂದು ನಾಮಕರಣ ಮಾಡಿದೆ.


Spread the love

About Karnataka Junction

[ajax_load_more]

Check Also

ಹೆಣ್ಣು ಮಕ್ಕಳೇ ಸ್ಟಾಂಗು ಗುರು ಕಾರ್ಯಕ್ರಮ ಸ್ಟಾರ್ ಸುವರ್ಣ ಚಾಲನೆ

Spread the loveಹುಬ್ಬಳ್ಳಿ: ನಗರದ ವಿನೂತನ ಪೌಂಡೇಶನ್ ಹುಬ್ಬಳ್ಳಿ ಅಧ್ಯಕ್ಷರು ಅಕ್ಕಮ್ಮಾ ಕಂಬಳಿ ಮುಂತಾದವರ ನೇತೃತ್ವದಲ್ಲಿ ಹೆಣ್ಣು ಮಕ್ಕಳೇ ಸ್ಟಾಂಗು …

Leave a Reply

error: Content is protected !!