ಕೊವಿಡ್ ನಿರ್ವಹಣೆ ವಿಚಾರದಲ್ಲಿ ಕೋರ್ಟ್ ನಿರ್ದೇಶನವನ್ನು ಸ್ವಾಗತ- ಜಗದೀಶ್ ಶೆಟ್ಟರ್

Spread the love

ಹುಬ್ಬಳ್ಳಿ;ಕೊವಿಡ್ ನಿರ್ವಹಣೆ ವಿಚಾರದಲ್ಲಿ ಕೋರ್ಟ್ ನಿರ್ದೇಶನವನ್ನು ಸ್ವಾಗತ ಮಾಡುತ್ತೇವೆ ಎಂದು ಸಚುವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,
ಕೋರ್ಟ್ ಸೂಚನೆ ಮೇಲೆಯೇ ಎಲ್ಲವೂ ನಡೆಯುತ್ತಿಲ್ಲ.
ನಮ್ಮ ಪ್ರಯತ್ನ ಮೀರಿ ನಾವು ಕೆಲಸ ಮಾಡುತ್ತಿದ್ದೇವೆ.
ನಮ್ಮ ಪ್ರಯತ್ನ ಮೀರಿ ಈಗ ಕೋವಿಡ್ ಹೆಚ್ಚಾಗಿದೆ.
ನಾವು ಸಹ ಕೆಲಸ ಮಾಡುತ್ತಿದ್ದೇವೆ. ಕೋರ್ಟ್ ನಿರ್ದೇಶನವನ್ನ ನಾವು ಸಹ ಸ್ವಾಗತ ಮಾಡುತ್ತೇವೆ.
ಅವರ ನಿರ್ದೇಶನದ ಬರುವವರೆಗೂ ಎಚ್ಚೆತ್ತುಕೊಳ್ಳಬೇಕು ಅಂತ ಏನಿಲ್ಲ. ನಮ್ಮ ಕೆಲಸವನ್ನ ನಾವು ಮಾಡುತ್ತಿದ್ದೇವೆ ಎಂದರು.
ಕಳೆದ ವಾರ ದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗಿತ್ತು.
ಚಾಮರಾಜನಗರದ ಘಟನೆಯನ್ನ ನೋಡಿ ಅದನ್ನ ನೀಗಿಸಲು ಪ್ರಯತ್ನ ಮಾಡಿದ್ದೆವು. 865 ರಿಂದ 965 ಮೆಟ್ರಿಕ್ಟ್ ಟನ್ ಬೇಕಾಗಿತ್ತು
ಆದ್ರೀಗ 1015 ಮೆಟ್ರಿಕ್ಟ್ ಟನ್ ರಾಜ್ಯಕ್ಕೆ ಅಲೋಕೇಟ್ ಆಗಿದೆ.
ಬೇರೆ ಜಿಲ್ಲೆಗಳಲ್ಲಿ ಕೊರತೆ ಇತ್ತು ಅದನ್ನ ಹಂಚಿಕೆ ಮಾಡುವ ಕಾರ್ಯ ನಡೆದಿದೆ.
ಇದರ ನಂತ್ರ ಇದೀಗ ನಮಗೆ ಆಕ್ಸಿಜೆನ್ ಕೊರತೆ ಆಗಲ್ಲ.
ನಮ್ಮ ರಾಜ್ಯದಲ್ಲಿ ತಯಾರಾಗುವ ಆಕ್ಸಿಜನ್ ನಮ್ಮ ರಾಜ್ಯಕ್ಕೆ ಸೀಮಿತ ಆಗಬೇಕು.
ಈ ಹಿನ್ನೆಲೆ ಕೇಂದ್ರ ಸರ್ಕಾರಕ್ಕೆ ಸಹ ನಾವು ಮನವಿ ಮಾಡಿದ್ದೇವೆ.‌1100 ಮೆಟ್ರಿಕ್ಟ್ ಟನ್ ನಮ್ಮಲ್ಲೇ ತಯಾರಾಗುತ್ತೆ.
ಹೀಗಾಗಿ ಅದು ನಮ್ಮ ರಾಜ್ಯಕ್ಕೆ ಸಿಗಬೇಕು, ಅದರ ಬಗ್ಗೆ ಮಾತನಾಡಿದ್ದೇನೆ ಎಂದರು.
ಜೇಮಶೆಡ್ಪೂರ್, ದೆಹಲಿ ಯಿಂದಲೂ ನಮಗೆ ಆಕ್ಸಿಜನ್ ಬಂದಿದೆ ಒಂದು ಟ್ಯಾಂಕರ್ ನಮ್ಮ ಹುಬ್ಬಳ್ಳಿ ಧಾರವಾಡಕ್ಕೆ ಮಾತ್ರ ಸೀಮಿತವಾಗಲಿದೆ. ಇದೆ 16 ನೆ ತಾರೀಖೆಗೆ ಬರಲಿದೆ.
L&T ಕಂಪನಿಯಿಂದಲೂ 2 ಆಕ್ಸಿಜೆನ್ ಟ್ಯಾಂಕ್ ಸ್ಥಾಪನೆ ಮಾಡಲಿದೆ. ಲಾಕ್ ಡೌನ್ ಮಾಡಿದ್ರು ಎಲ್ಲವನ್ನ ಮೀರಿ ಹೋಗುತ್ತಿದೆಹೀಗಾಗಿ ನಾವು ಸಹ ನಿರಂತರವಾಗಿ ಕಾರ್ಯ ಮಾಡುತ್ತಿದ್ದೇವೆ ಎಂದರು.
ಕೇವಲ ಸಿಟಿಗೆ ಮಾತ್ರ ಸೀಮಿತವಾಗಿದ್ದ ಕೋವಿಡ್ ಅಂತ್ಯಕ್ರಿಯೆ ಇದೀಗ ಗ್ರಾಮೀಣ ಭಾಗಕ್ಕೂ ಸಹ ಬೇಡಿಕೆ ಹೆಚ್ಚಿದೆ.
ಹೀಗಾಗಿ ಗ್ರಾಮೀಣ ಭಾಗದಲ್ಲೂ ಉಚಿತವಾಗಿ ಕೋವಿಡ್ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿದ್ದೇವೆ.
ತಾಲೂಕು ಮಟ್ಟದ ತಹಶೀಲ್ದಾರ್ ರರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿ ಇನ್ನು ಮುಂದೆ ಉಚಿತವಾಗಿ ಅಂತ್ಯಕ್ರಿಯೆ ನಡೆಯಲಿದೆ ಎಂದರು.


Spread the love

Leave a Reply

error: Content is protected !!