Breaking News

ಗಾಜಾ ನಗರದಲ್ಲಿ ದಿಟ್ಟ ಪತ್ರಕರ್ತೆ ಅವರ ವೈಮಾನಿಕ ದಾಳಿ ನಡೆಯುವ ವೇಳೆಯೂ ಲೈವ್​ ರಿಪೋರ್ಟ್ ಮೈರೊಮಾಂಚನ

Spread the love

ಪ್ಯಾಲೆಸ್ತೀನ್: ಇಸ್ರೇಲ್ – ಪ್ಯಾಲೆಸ್ತೀನ್ ಸಂಘರ್ಷ ಜಾಗತಿಕ ಆತಂಕ ಉಂಟು ಮಾಡಿದೆ. ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರವಾದಿ ಪಡೆಗಳು ದಾಳಿ ನಡೆಸುತ್ತಿದ್ದರೆ ಅದಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್‌ ದೇಶ ಗಾಜಾ ಹಾಗು ವೆಸ್ಟ್‌ಬ್ಯಾಂಕ್‌ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಸದ್ಯ ಇಲ್ಲಿ ರಾಕೆಟ್​​ಗಳು, ಕ್ಷಿಪಣಿಗಳ ಆರ್ಭಟ ವಿಪರೀತವಾಗಿದೆ. ವಿಧ್ವಂಸಕಾರಿ ರಾಕೆಟ್‌ಗಳು ಬಾಂಬ್‌ಗಳನ್ನು ಕಟ್ಟಡಗಳೆಡೆಗೆ ಹಾಕುತ್ತಿದ್ದು, ಜನರು ಪ್ರಾಣ ಕೈಯಲ್ಲಿ ಹಿಡಿದು ಮನೆಯೊಳಗೆ ಕುಳಿತಿದ್ದಾರೆ. ಆದರೆ ಓರ್ವ ದಿಟ್ಟ ಪತ್ರಕರ್ತೆ ಮಾತ್ರ ತಾನು ನಿಂತಿರುವ ಸ್ಥಳದ ಸುತ್ತಲೂ ದಾಳಿಯಾಗುತ್ತಿದ್ದರೂ ಅದನ್ನು ವರದಿ ಮಾಡುತ್ತಿದ್ದಾರೆ.
ಗಾಜಾ ನಗರದಿಂದ ಪತ್ರಕರ್ತೆ ಯೂಮ್ನಾ ಅಲ್‌ ಸಯೀದ್‌ ಗ್ರೌಂಡ್‌​ ರಿಪೋರ್ಟ್​ಪ್ಯಾಲೆಸ್ತೀನ್​ನ ಗಾಜಾ ನಗರದಲ್ಲಿ ಅಲ್ ಜಝೀರಾ ಸುದ್ದಿ ವಾಹಿನಿಯ ಪ್ರತಿನಿಧಿ ಯೂಮ್ನಾ ಅಲ್ ಸಯೀದ್ ಅವರು ದಾಳಿಯ ಸ್ಥಳಕ್ಕೆ ತೆರಳಿ ವಿವರಣೆ ನೀಡುತ್ತಿರುತ್ತಾರೆ. ಈ ವೇಳೆ ಅವರು, “ಬಹುತೇಕ ಎಲ್ಲಾ ಮಾಧ್ಯಮ ಕಚೇರಿಗಳು ಈ ಟವರ್​​ನಲ್ಲಿವೆ, ನೀವು ನೋಡ್ತಾ ಇದೀರಾ, ಈ ಟವರ್​ ಅನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ” ಎಂದು ಹೇಳುತ್ತಿದ್ದಂತೆಯೇ ದಾಳಿಯಾಗಿದೆ. “ಓ ಮೈ ಗಾಡ್​, ಕ್ಷಮಿಸಿ, ನಾನು ಕೆಳಗಿಳಿಯಬೇಕು, ನನ್ನಿಂದ ಸಾಧ್ಯವಿಲ್ಲ” ಎಂದು ಆಕೆ ಸ್ಫೋಟ ನಡೆದ ಕಟ್ಟಡದೆಡೆ ಕ್ಯಾಮೆರಾವನ್ನು ತಿರುಗಿಸಲು ಸೂಚಿಸುತ್ತಾರೆ.
ಇಸ್ರೇಲ್ – ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ವೈಮಾನಿಕ ದಾಳಿಯಲ್ಲಿ ಈಗಾಗಲೇ 70ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಅನೇಕ ಬಹುಮಹಡಿ ಕಟ್ಟಡಗಳು ನಾಶವಾದ ವರದಿ ಮಾಡಲಾಗಿದೆ.


Spread the love

About Karnataka Junction

[ajax_load_more]

Check Also

ರಾಜ್ಯ ಪ್ರಶಸ್ತಿಗೆ ಈರಪ್ಪ ಎಮ್ಮಿ ಆಯ್ಕೆ

Spread the loveರಾಜ್ಯ ಪ್ರಶಸ್ತಿಗೆ ಈರಪ್ಪ ಎಮ್ಮಿ ಆಯ್ಕ ಹುಬ್ಬಳ್ಳಿ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ …

Leave a Reply

error: Content is protected !!