Breaking News

ಮುಷ್ಕರ ನಡೆಸಿದ್ದ ಸಾರಿಗೆ ನೌಕರರ ಅಮಾನತ್ ಆದೇಶ ರದ್ದು, ವರ್ಗಾವಣೆ ಹಿಂದಕ್ಕೆ

Spread the love

ಬೆಂಗಳೂರು: ಮುಷ್ಕರ ನಡೆಸಿದ್ದಕ್ಕಾಗಿ ಸಾವಿರಾರು ಸಾರಿಗೆ ನೌಕರರ ವಿರುದ್ಧ ಹೊರಡಿಸಿದ್ದ ಅಮಾನತು ಆದೇಶಗಳನ್ನು ರದ್ದುಪಡಿಸಲಾಗಿದೆ ಹಾಗೂ ಹಲವರ ವರ್ಗಾವಣೆ ಆದೇಶಗಳನ್ನು ಹಿಂಪಡೆಯಲಾಗಿದೆ ಎಂದು ಸಾರಿಗೆ ನಿಗಮ ಹೈಕೋರ್ಟ್​ಗೆ ಮಾಹಿತಿ ನೀಡಿದೆ.
ಸಾರಿಗೆ ನೌಕರರ ಮುಷ್ಕರ ತಡೆಯಲು ಹಾಗೂ ಮುಷ್ಕರದಿಂದ ಉಂಟಾಗಿರುವ ನಷ್ಟ ವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ “ಸಮರ್ಪಣಾ’ ಸ್ವಯಂ ಸೇವಾ ಸಂಸ್ಥೆ, ವಕೀಲ ನಟರಾಜ್ ಶರ್ಮಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.ಈ ವೇಳೆ ನಿಗಮಗಳ ಪರ ವಕೀಲರಾದ ಎಚ್.ಆರ್ ರೇಣುಕಾ ಮೆಮೋ ಸಲ್ಲಿಸಿ, ಹೈಕೋರ್ಟ್ ಸೂಚನೆ ಮೇರೆಗೆ ಮೇ 3ರಂದು ಸಾರಿಗೆ ನೌಕರರ ಸಂಟನೆಗಳೊಂದಿಗೆ ಸಭೆ ನಡೆಸಲಾಗಿದೆ. ಕೆಲ ಬೇಡಿಕೆಗಳನ್ನು ಈಡೇರಿಸಲು ಸಮ್ಮತಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕೆಲವೊಂದು ಬೇಡಿಕೆಗಳನ್ನು ಕೈಬಿಡಲಾಗಿದೆ. ಕೆಲ ನೌಕರರ ವರ್ಗಾವಣೆ ಆದೇಶ ಹಿಂಪಡೆಯಲಾಗಿದ್ದು, ಬಹುತೇಕರ ಅಮಾನತು ಆದೇಶಗಳನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.ಸಾರಿಗೆ ನೌಕರರ ಪರ ವಕೀಲರು ಆಕ್ಷೇಪಿಸಿ, ಸಭೆ ನಡಾವಳಿಯ ಮಾಹಿತಿ ತಮಗೆ ಲಭ್ಯವಾಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನೌಕರರ ಒಕ್ಕೂಟಕ್ಕೂ ಪ್ರತಿ ಒದಗಿಸುವಂತೆ ಸಾರಿಗೆ ನಿಗಮಗಳ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಿತು.ಸಾರಿಗೆ ನಿಗಮ ಸಲ್ಲಿಸಿರುವ ಮಾಹಿತಿ:ಮುಷ್ಕರದ ನಡೆಸಿದ ಹಿನ್ನೆಲೆಯಲ್ಲಿ ಬಿಎಂಟಿಸಿಯಲ್ಲಿ 2,494 ನೌಕರರನ್ನು ಅಮಾನತು ಮಾಡಲಾಗಿತ್ತು. ಇದರಲ್ಲಿ 2,421 ಅಮಾನತು ಆದೇಶಗಳನ್ನು ರದ್ದುಪಡಿಸಲಾಗಿದೆ. ಕೆಎಸ್ಆರ್​ಟಿಸಿಯಲ್ಲಿ ಅಮಾನತುಗೊಂಡಿದ್ದ 143 ನೌಕರರಲ್ಲಿ 11 ಮಂದಿಯ ಅಮಾನತು ಆದೇಶ ರದ್ದುಪಡಿಸಲಾಗಿದೆ. ಎನ್​ಡಬ್ಲ್ಯುಕೆಆರ್​ಟಿಸಿಯ 60 ಮಂದಿಯಲ್ಲಿ ಒಬ್ಬರ ವಿರುದ್ಧ ಅಮಾನತು ಆದೇಶ ಹಿಂಪಡೆಯಲಾಗಿದ್ದು, ಎನ್ಇಕೆಆರ್​ಟಿಸಿಯ 63 ನೌಕರರಲ್ಲಿ 52 ನೌಕರರ ಅಮಾನತು ಆದೇಶ ಹಿಂಪಡೆಯಾಲಾಗಿದೆ. ಇನ್ನು ಕೆಎಸ್ಆರ್​ಟಿಸಿಯ 848 ಜನರನ್ನು ವರ್ಗಾವಣೆ ಮಾಡಲಾಗಿತ್ತು, ಅದರಲ್ಲಿ 511 ನೌಕರರ ವರ್ಗಾವಣೆ ಆದೇಶ ರದ್ದುಪಡಿಸಲಾಗಿದೆ ಎಂದು ನಿಗಮ ಹೇಳಿದೆ.


Spread the love

About Karnataka Junction

[ajax_load_more]

Check Also

ವಿದ್ಯಾಮಂತ್ರಿಗೆ ಕನ್ನಡ ಬರಲ್ಲ” ಎಂದಿರುವ ವಿದ್ಯಾರ್ಥಿ ಮೇಲೆ ಇಂಗ್ಲೀಷ್ ನಲ್ಲೇ ಕ್ರಮಕ್ಕೆ ಸೂಚನೆ ಅಕ್ಷಮ್ಯ

Spread the loveಹುಬ್ಬಳ್ಳಿ: ‘ವಿದ್ಯಾಮಂತ್ರಿಗೆ ಕನ್ನಡ ಬರಲ್ಲ’ ಎಂದ ವಿದ್ಯಾರ್ಥಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷೆ ವಿಧಿಸಲು ಸೂಚಿಸಿರುವುದು …

Leave a Reply

error: Content is protected !!