ಹುಬ್ಬಳ್ಳಿ: ಬಿಜೆಪಿ ಮುಖಂಡ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ವೀರಣ್ಣ ಸವಡಿ ಅವರ ತಂದೆ ಸಂಗಪ್ಪ ಅವರ ಆರೈಕೆ ಮಾಡುತ್ತಿದ್ದ ಹಾವೇರಿ ಮೂಲದ ವ್ಯಕ್ತಿ, ಅವರ ಮನೆಯಲ್ಲಿದ್ದ ₹1.60 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ವಾಚ್‌ಗಳನ್ನು ಕಳವು ಮಾಡಿದ್ದಾನೆ.ವೀರಣ್ಣ ಸವಡಿ ನೀಡಿದ ದೂರಿನ ಮೇರೆಗೆ ಸವಣೂರು ತಾಲ್ಲೂಕಿನ ಬದ್ನಿ ತಾಂಡಾದ ಅರುಣ ನಾಯ್ಕ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವೀರಣ್ಣ ಅವರು ವಯಸ್ಸಾದ ತಂದೆಯವರ ಆರೈಕೆ ಮಾಡಲೆಂದು ಅರುಣನನ್ನು ನೇಮಕ ಮಾಡಿಕೊಂಡಿದ್ದರು. ಮನೆಯವರ ವಿಶ್ವಾಸಗಳಿಸಿಕೊಂಡಿದ್ದ ಅವನು, ಸಂಗಪ್ಪ ಒಬ್ಬರೇ ಮನೆಯಲ್ಲಿ ಇದ್ದಾಗ ಕಪಾಟಿನಲ್ಲಿದ್ದ ₹1.32 ಲಕ್ಷ ಮೌಲ್ಯದ ಚಿನ್ನಾಭರಣ, ₹23 ಸಾವಿರ ನಗದು ಹಾಗೂ ₹5 ಸಾವಿರ ಮೌಲ್ಯದ ಎರಡು ವಾಚ್‌ಗಳನ್ನು ಕಳವು ಮಾಡಿದ್ದಾನೆ.
Check Also
ನಿರಂತರ ಮಳೆ, ಶೀತಗಾಳಿ ಕಾರಣ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಜು.25, 26 ರಂದು ರಜೆ ಘೋಷಿಸಿ, ಜಿಲ್ಲಾಧಿಕಾರಿ ಆದೇಶ*
Spread the loveಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ ಮತ್ತು ತಂಪು (ಶೀತ) ಗಾಳಿ ಬೀಸುತ್ತಿರುವದರಿಂದ ನಾಳೆ ಜುಲೈ …