Breaking News

ಸದ್ಯಕ್ಕೆ 18 ರಿಂದ 44 ವರ್ಷದವರಿಗೆ ಲಸಿಕೆ ನೀಡುವ ಅಭಿಯಾನ ರದ್ದು

Spread the love

ಬೆಂಗಳೂರು: ರಾಜ್ಯದಲ್ಲಿ ಲಸಿಕಾ ಕಾರ್ಯಕ್ರಮ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ 45 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದವರ ಲಸಿಕಾಕರಣಕ್ಕಾಗಿ ಹಂಚಿಕೆಯಾದ ಲಸಿಕೆಗಳನ್ನು 2ನೇಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳಿಗೆ ಮಾತ್ರ ಬಳಸಲು ನಿರ್ಧರಿಸಿದೆ.
ಬುಧವಾರ ರಾಜ್ಯ ಸರ್ಕಾರವು ನೇರವಾಗಿ 18 ರಿಂದ 44 ವರ್ಷದ ವಯೋಮಾನದ ಫಲಾನುಭವಿಗಳ ಲಸಿಕಾಕರಣಕ್ಕೆ ಖರೀದಿಸಿದ ಪೂರ್ಣ ದಾಸ್ತಾನನ್ನು ಸಹ 2ನೆಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಬಳಕೆಗೆ ವಿನಿಯೋಗಿಸಲು ನಿರ್ಧರಿಸಿದೆ. ಆದ್ದರಿಂದ ರಾಜ್ಯದಲ್ಲಿ ಇರುವ ಎಲ್ಲಾ ಲಸಿಕೆಗಳ (ಕೇಂದ್ರ ಸರ್ಕಾರದಿಂದ ಒದಗಿಸಲಾದ ಹಾಗೂ ರಾಜ್ಯ ಸರ್ಕಾರದಿಂದ ನೇರವಾಗಿ ಖರೀದಿಸಿದ) ಪೂರ್ಣ ದಾಸ್ತಾನನ್ನು 2ನೇಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಲಸಿಕಾಕರಣಕ್ಕೆ ಮಾತ್ರ ಬಳಸಲು ಮುಂದಾಗಿದೆ.ಈ ಹಿನ್ನೆಲೆಯಲ್ಲಿ 18 ರಿಂದ 44 ವರ್ಷ ವಯೋಮಾನದವರ ಕೋವಿಡ್ ಲಸಿಕಾಕರಣವನ್ನು (ಈಗಾಗಲೇ ಲಸಿಕೆಗಾಗಿ ಸಮಯ ನಿಗದಿಪಡಿಸಿಕೊಂಡವರೂ ಸೇರಿದಂತೆ) ಮೇ 14 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಸಲಾಗಿದೆ. ಈ ಆದೇಶವು ಕೋವಿಡ್ ಲಸಿಕಾಕರಣ ನಡೆಸುತ್ತಿರುವ ಎಲ್ಲಾ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಿಗೆ ಅನ್ವಯವಾಗಲಿದೆ‌‌.


Spread the love

About Karnataka Junction

    Check Also

    ಗ್ರಾಹಕರಲ್ಲಿ ಗುಣಮಟ್ಟದ ವಸ್ತುಗಳ ಜಾಗೃತಿಗಾಗಿ ಕ್ವಾಲಿಟಿ ವಾಕ್‌

    Spread the loveಹುಬ್ಬಳ್ಳಿ: ಇಲ್ಲಿಯ ಬ್ಯೂರೋ ಆಫ್ ಇಂಡಿಯನ್ ಸ್ಟಶ್ಚಯಂಡರ್ಡ್ಸ್ (ಬಿಐಎಸ್‌) ಶಾಖೆ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಕ್ವಾಲಿಟಿ ವಾಕ್‌ಗೆ …

    Leave a Reply

    error: Content is protected !!