ಹುಬ್ಬಳ್ಳಿ: ಗಾಂಜಾ ಸಾಗಾಟದಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತರಿಂದ 4 ಕೆ.ಜಿ.ಯಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರನ್ನು ಯಮಕನಮರಡಿಯ ಶೋಕಿನ ಚೌಧರಿ, ಹಾವೇರಿಯ ಮೆಹಬೂಬಾಲಿ ಶೇಖ, ಹಳೇಹುಬ್ಬಳ್ಳಿ ಆನಂದನಗರದ ಮೊಹ್ಮದ ಇಸ್ಮಾಯಿಲ್ ಮನಿಯಾರ ಎಂದು ಗುರುತಿಸಲಾಗಿದ್ದು, ಬಂಧಿತರ ತಂಡದಲ್ಲಿದ್ದ ಆಂಧ್ರಪ್ರದೇಶದ ಸಮರಲ್ಲ ಕೋಟಾದ ಶಾನವಾಜ್ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಇನ್ನು, ಬಂಧಿತರಿಂದ 40,400 ರೂ. ಮೌಲ್ಯದ 4ಕೆಜಿ 40ಗ್ರಾಂ ಗಾಂಜಾ, ಎರಡು ಮೊಬೈಲ್, ಒಂದು ಬೈಕ್,1,380 ರೂ.ನಗದು ವಶಪಡಿಸಿಕೊಂಡಿದ್ದಾರೆ. ಇ ಆ್ಯಂಡ್ ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Check Also
ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ
Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …