ಮಹಾಮಾರಿ ಕರೋನಾಗೆ ಒಂದೇ ಕುಟುಂಬದ ಮೂವರು ಸದಸ್ಯರು ಬಲಿ

Spread the love

 • ಧಾರವಾಡ: ಕಿಲ್ಲರ್ ಕೊರೊನಾಕ್ಕೆ ಒಂದೇ ಕುಟುಂಬದ ಮೂವರು ಸದಸ್ಯರು ಬಲಿಯಾಗಿರುವ ಘಟನೆ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ.
  ಹಾರೋಬೆಳವಡಿ ಗ್ರಾಮದ ಶೇಖವ್ವ (75) ಎಂಬ ವೃದ್ಧೆ ಕಳೆದ ಮೂರು ದಿನಗಳ ಹಿಂದಷ್ಟೆ ಕೊರೊನಾಕ್ಕೆ ಬಲಿಯಾಗಿದ್ದರು. ಇಂದು ಆಕೆಯ ಇಬ್ಬರು ಪುತ್ರರು ಕೊರೊನಾಕ್ಕೆ ಬಲಿಯಾಗಿದ್ದಾರೆ.
  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಘಟಕದಲ್ಲಿ
  ಈ ಇಬ್ಬರೂ ಸಹೋದರರು ಕರ್ತವ್ಯ ನಿರ್ವಹಿಸುತ್ತಿದ್ದರು. ಗ್ರಾಮದ ಶಿವಪ್ಪ (49) ಹಾಗೂ ಬೂದಪ್ಪ (42) ( ಹೆಸರು ಬದಲಾವಣೆ ಮಾಡಲಾಗಿದೆ) ಎಂಬುವವರೇ
  ಕೊರೊನಾಕ್ಕೆ ಬಲಿಯಾದ ದುರ್ದೈವಿಗಳು.
  ಇದೀಗ ಒಂದೇ ಕುಟುಂಬದ ಮೂವರು ಸದಸ್ಯರು ಕೊರೊನಾಕ್ಕೆ ಬಲಿಯಾಗಿರುವುದರಿಂದ ಇಡೀ ಹಾರೋಬೆಳವಡಿ ಗ್ರಾಮದಲ್ಲಿ ಆತಂಕ ನಿರ್ಮಾಣವಾಗಿದೆ.

Spread the love

Leave a Reply

error: Content is protected !!