ಬೆಂಗಳೂರು : ಯಾವುದೇ ಮುಲಾಜಿಲ್ಲದೇ ನಾಳೆಯಿಂದ 14 ದಿನ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಾಗುತ್ತಿದೆ. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಕಠಿಣವಾಗಿ ಲಾಕ್‌ಡೌನ್ ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ನಾಳೆಯಿಂದ 14 ದಿನ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿಯಾಗಲಿದ್ದು ಇದನ್ನು ಬಿಗಿಯಾಗಿ ಜಾರಿ ಮಾಡುವ ಹೊಣೆ ನಿಮ್ಮದು, ಮಾಡು ಇಲ್ಲವೇ ಮಡಿ ಎನ್ನುವಂತಹ ಸ್ಥಿತಿ ಎದುರಾಗಿದೆ. ಜಿಲ್ಲೆಗಳಲ್ಲಿ ಕಠಿಣ ರೀತಿಯಲ್ಲಿ ಲಾಕ್‌ಡೌನ್ ಜಾರಿ ಮಾಡಬೇಕು. ಈ ಬಾರಿ ಎಡವಿದರೆ ಭಾರೀ ಬೆಲೆ ತೆರಬೇಕಾಗುತ್ತದೆ.ಹಾಗಾಗಿ, ನಿಮ್ಮ ನಿಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಟಫ್ ರೂಲ್ಸ್ ಪರಿಣಾಮಕಾರಿಯಾಗಿ ಜಾರಿಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದು, ನಾಳೆಯಿಂದ ನಗರದಲ್ಲಿ ಟಫ್ ರೂಲ್ಸ್ ಪರಿಣಾಮಕಾರಿ ಜಾರಿಯಾಗುವಂತೆ ನೋಡಿಕೊಳ್ಳಬೇಕು, ಅನಗತ್ಯ ವಾಹನ ಸಂಚಾರ, ಜನರ ಸಂಚಾರಕ್ಕೆ ಬ್ರೇಕ್ ಹಾಕಬೇಕು ಎಂದು ಸೂಚನೆ ನೀಡಿದ್ದಾರೆ.ಇದೇ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಂದಲೂ ಜಿಲ್ಲೆಗಳಲ್ಲಿ ಲಾಕ್‌ಡೌನ್ ಜಾರಿ ಸಂಬಂಧ ಪೊಲೀಸ್ ಇಲಾಖೆ ಮಾಡಿಕೊಂಡಿರುವ ಸಿದ್ದತೆಗಳ ಮಾಹಿತಿ ಪಡೆದುಕೊಂಡರು. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿಯೇ ಇದ್ದು ಟಪ್ ರೂಲ್ಸ್ ಯಶಸ್ಸಿ ಮಾಡಲು ತಾಕೀತು ಮಾಡಿದ್ದಾರೆ.
![](https://karnatakajunction.com/wp-content/uploads/2022/09/download-2.jpeg)