ಹುಬ್ಬಳ್ಳಿ: ಕೊರೋನಾ ಗೆದ್ದು ಬಂದ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆ ಸೇನಾನಿ ಹುಚ್ಚಪ್ಪ ಕೊರವರ ಅವರನ್ನು ಶನಿವಾರ ಠಾಣೆಯ ಆವರಣದಲ್ಲಿ ಸ್ವಾಗತ ಸನ್ಮಾನ ಮಾಡಲಾಯಿತು. ಕೋವೀಡ್ ವಾರಿಯರ್ಸ್ ಗಳಾದ ಇವರು
ಕೊರೋನಾ ವೈರಸ್ ವಿರುದ್ಧ ಶತಾಯ ಗತಾಯು ಹೋರಾಟ ನಡೆಸಿದ ಪೊಲೀಸ್ ಸಿಬ್ಬಂದಿ ಹುಚ್ಚಪ್ಪ ಕೊರವರ ಜಯಶಾಲಿಯಾಗಿ ಕರ್ತವ್ಯಕ್ಕೆ ಹಾಜರಾದರು.ಕಣ್ಣಿಗೆ ಕಾಣಸದ ಕೊರೋನಾ ವೈರಸ್ ಬೆನ್ನುಬಿಡದೇ ಕಾಡುತಿತ್ತು.
ಅಲ್ಲದೇ ಕೊರೋನಾ ವೈರಸ್ ಹುಚ್ಚಪ್ಪ ಅವರನ್ನು ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಸನ್ಮಾನಿಸಿ ಅಭಿನಂದಿಸಿದರು.
ಪೂರ್ವ ಸಂಚಾರಿ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸೆಪೆಕ್ಟರ್ ಕಾಡದೇವರಮಠ,
ಸಿಬ್ಬಂದಿ ವರ್ಗ ಇದ್ದರು. ಠಾಣೆಯ ಸಿಬ್ಬಂದಿಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಯಿತು.
