ಚೆನೈ ವಿಮಾನ ನಿಲ್ದಾಣದಲ್ಲಿ 100 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ

Spread the love

ಚೆನ್ನೈ: ನಗರದ ವಿಮಾನ ನಿಲ್ದಾಣದಲ್ಲಿ 100 ಕೋಟಿ ರೂ. ಮೌಲ್ಯದ 15 ಕೆಜಿ ಹೆರಾಯಿನ್​ ವಶಕ್ಕೆ ಪಡೆದುಕೊಳ್ಳುವಲ್ಲಿ ಇಲ್ಲಿನ ಅಧಿಕಾರಿಗಳು ಯಶಸ್ವಿಯಾಗಿದ್ದು, ಇಬ್ಬರ ಬಂಧನ ಮಾಡಿದ್ದಾರೆ. ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಾಂಜೇನಿಯಾ ಪ್ರಜೆಗಳ ಬಂಧನ ಮಾಡಲಾಗಿದೆ ಎಂದು ಕಸ್ಟಮ್ಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಫ್ರಿಕಾದಿಂದ ಭಾರತಕ್ಕೆ ಕೆಲ ಮಾದಕ ದ್ರವ್ಯ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಸ್ಟಮ್ಸ್​ ಅಧಿಕಾರಿಗಳು 46 ವರ್ಷದ ಮಹಿಳೆ ಹಾಗೂ ಆಕೆಯ ಸಹಚರನನ್ನ ವಶಕ್ಕೆ ಪಡೆದುಕೊಂಡಿದೆ.100 ಕೋಟಿ ರೂ. ಮೌಲ್ಯದ ಹೆರಾಯಿನ್​ ವಶಕ್ಕೆ, ಇಬ್ಬರ ಬಂಧನಪ್ಯಾಕೆಟ್​ಗಳಲ್ಲಿ ಹೆರಾಯಿನ್ ಹಾಕಲಾಗಿದ್ದು, ಅದರಿಂದ ವಾಸನೆ ಹೊರ ಬರದಂತೆ ಕೆಲ ಮಸಾಲೆಯುಕ್ತ ಪದಾರ್ಥಗಳ ಪುಡಿ ಚಿಮುಕಿಸಲಾಗಿದೆ. ಮಹಿಳೆ ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತನ್ನ ಸಹಾಯಕನ ಜೊತೆಗೆ ವೈದ್ಯಕೀಯ ಚಿಕಿತ್ಸೆಗೆ ಬರುತ್ತಿರುವುದಾಗಿ ಹೇಳಿ ಭಾರತದ ಪ್ರಯಾಣ ಕೈಗೊಂಡಿದ್ದಳು. ಅವರಿಗೆ ಬೆಂಗಳೂರಿಗೆ ನೇರ ವಿಮಾನ ಸಿಗದ ಕಾರಣ ಚೆನ್ನೈಗೆ ಬಂದಿಳಿದಿದ್ದರು. ಇಲ್ಲೇ ಅವರ ಬಂಧನ ಮಾಡಲಾಗಿದೆ.


Spread the love

About gcsteam

    Check Also

    ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್

    Spread the loveಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ …

    Leave a Reply