Breaking News

ಇದು ಲಾಕ್ ಡೌನ್ ಸ್ವಲ್ಪ ರೂಲ್ಸ್ ಟಫ್ ಅಷ್ಟೇ

Spread the love

ಬೆಂಗಳೂರು : ಜನತಾ ಕರ್ಫ್ಯೂ ಸಾಕಷ್ಟು ಯಶಸ್ಸು ಕಾಣದ ಕಾರಣದಿಂದ ಕರ್ನಾಟಕದಲ್ಲಿ ಶುಕ್ರವಾರ ಲಾಕ್​ಡೌನ್ ಮಾಡಿ ಮತ್ತಷ್ಟು ಕಠಿಣಗೊಳ್ಳುತ್ತದೆ ಎಂದು ಭಾವಿಸಲಾಗಿತ್ತು.‌ಅದರೆ ಇದು ಲಾಕ್ ಡೌನ್ ಕೇವಲ ಸ್ವಲ್ಪ ರೂಲ್ಸ್ ಬದಲಾವಣೆ ಮಾಡಲಾಗಿದೆ.
ರಾಜ್ಯ ಸರ್ಕಾರದ ಕೋವಿಡ್ ನಿಯಂತ್ರಣಕ್ಕೆ
ಮೇ 10ರ ಬೆಳಗ್ಗೆ 6ರಿಂದ ಮೇ 24ರವರೆಗೆ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿರಲಿದೆ ಎಂದು ಹೇಳುತಿದೆ. ಆದರೆ ಇದ್ಯಾವ ಲಾಕ್ ಡೌನ್. ಅಗತ್ಯ ಸೇವೆಗಳನ್ನ ಹೊರತುಪಡಿಸಿ ಇನ್ನುಳಿದ ಚಟುವಟಿಕೆಗಳು ಅನುಮತಿ ಇಲ್ಲ ಎಂದು ಸಿಎಂ ಬಿ ಎಸ್​ ಯಡಿಯೂರಪ್ಪ ಘೋಷಿಸಿದ್ದಾರೆ.ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ 50 ಸಾವಿರಕ್ಕೂ ಹೆಚ್ಚು ಪ್ರಕರಣ ವರದಿಯಾಗುತ್ತಿವೆ. ಪಾಸಿಟಿವಿಟಿ ದರವೂ ಹೆಚ್ಚಾಗಿದೆ. ರಾಜ್ಯ ಸರ್ಕಾರವು ಕೋವಿಡ್- 19 ನಿಯಂತ್ರಣಕ್ಕಾಗಿ ಏಪ್ರಿಲ್ 26 ರಂದು ಮಾರ್ಗಸೂಚಿಗಳನ್ನು ಹೊರಡಿಸಿತ್ತು.ಆದರೆ, ಇದೀಗ ಸೋಂಕು ಹರಡುವುದನ್ನು ತಡೆಗಟ್ಟಲು ಇನ್ನಷ್ಟು ಕಟ್ಟುನಿಟ್ಟಿನ ನಿಯಂತ್ರಣಾ ಕ್ರಮಗಳನ್ನು ಕೈಗೊಂಡಿದೆ. ಹೊಸ ಮಾರ್ಗಸೂಚಿಯು ಮೇ 10ರ ಬೆಳಗ್ಗೆ 6ರಿಂದ ಮೇ 24ರ ಬೆಳಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರಲಿದೆ..
ಈ ಕಾಟಾಚಾರದ ಲಾಕ್​ಡೌನ್​ನಲ್ಲಿ ಏನಿರುವುದಿಲ್ಲ..? ಏನಿರುತ್ತದೆ ನೋಡಿ..
ಲಾಕ್​ಡೌನ್​ ಅವಧಿಯಲ್ಲಿ ಬಸ್, ಮೆಟ್ರೋ ರೈಲು ಸಂಚಾರ ಇರುವುದಿಲ್ಲಶಾಲೆ, ಕಾಲೇಜುಗಳು, ಶಿಕ್ಷಣ/ ಕೋಚಿಂಗ್ ಸಂಸ್ಥೆಗಳ ತರಗತಿಗಳು ಬಂದ್​ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್​ಗಳು, ಕ್ರೀಡಾ ಸಂಕೀರ್ಣಗಳು ಬಂದ್​ಈಜುಕೊಳ, ಉದ್ಯಾನವನಗಳು, ಮನರಂಜನಾ ಪಾರ್ಕ್​​ಗಳು, ಬಾರ್​ಗಳು ಬಂದ್​ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶವಿಲ್ಲಎಲ್ಲಾ ಧಾರ್ಮಿಕ ಸ್ಥಳಗಳು/ ಪೂಜಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಜಿಲ್ಲೆಯಿಂದ ಜಿಲ್ಲೆಗೆ ಜನರ ಓಡಾಟಕ್ಕೆ ಅವಕಾಶ ನೀಡದ ಸರ್ಕಾರ
ಲಾಕ್​ಡೌನ್​ನಲ್ಲಿ ಏನಿರುತ್ತದೆ..?
ಈಗಾಗಲೇ ನಿಗದಿಯಾಗಿರುವ ವಿಮಾನ ಮತ್ತು ರೈಲುಗಳು ಸಂಚರಿಸಲಿವೆಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳಿಗೆ ತುರ್ತು ಸಂದರ್ಭಗಳಲ್ಲಿ ಅವಕಾಶಹೋಟೆಲ್​ಗಳು, ರೆಸ್ಟೋರೆಂಟ್​ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶಹೋಂ ಡೆಲಿವರಿ ಸೇವೆಗಳನ್ನು ಮಾತ್ರ ಒದಗಿಸಲು ಅನುಮತಿರಾಜ್ಯ ಮತ್ತು ಕೇಂದ್ರ ಸರ್ಕಾರದ ಅಗತ್ಯ ಸೇವೆ ನೀಡುವ ಕಚೇರಿಗಳು ಒಪನ್ಎಲ್ಲಾ ಆರೋಗ್ಯ ಸೇವಾ ಸೌಲಭ್ಯಗಳು ಮತ್ತು ಸಂಬಂಧಿತ ಸೇವೆಗಳಿಗೆ ಅವಕಾಶಎಲ್ಲಾ ಕೃಷಿ ಮತ್ತು ಪೂರಕ ಚಟುವಟಿಕೆಗಳು, ಮೀನುಗಾರಿಕೆ, ಕೋಳಿ ಸಾಕಾಣಿಕೆಗೆ ಅವಕಾಶವಿಲ್ಲಾ ಅಗತ್ಯ ಸರಕು-ಸಾಗಾಣಿಕೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿಸಾರ್ವಜನಿಕರ ಓಡಾಟಕ್ಕೆ ನಿಷೇಧ, ಕೆಲವು ವಿನಾಯಿತಿಗಳೊಂದಿಗೆ ಅವಕಾಶಬೆಳಗ್ಗೆ 6 ರಿಂದ 10 ಗಂಟೆಯವರೆಗೆ ತೆರೆಯಲು ಆಹಾರ, ದಿನಸಿ ಅಂಗಡಿಗಳು ಓಪನ್ ಆಗಿರುತ್ತವೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮದ್ಯ ಮಾರಾಟ ಮಳಿಗೆಗಳಲ್ಲಿ ಪಾರ್ಸಲ್ ಇದೆ. ಸಂಪರ್ಕ, ಇಂಟರ್ ನೆಟ್ ಸೇವೆ, ಪ್ರಸಾರ ಮತ್ತು ಕೇಬಲ್ ಸೇವೆಗಳುಅಗತ್ಯ ವಸ್ತುಗಳ ತಯಾರಿಕಾ ಘಟಕಗಳ ಕಾರ್ಯನಿರ್ವಹಣೆಗೆ ಅವಕಾಶ. ಐಟಿ ಮತ್ತು ಐಟಿಇಎಸ್ ಕಂಪನಿಗಳ ಅಗತ್ಯ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಣೆಗೆ ಅವಕಾಶಅಂತ್ಯಸಂಸ್ಕಾರದಲ್ಲಿ ಗರಿಷ್ಠ 5 ಜನರಿಗೆ ಪಾಲುಗೊಳ್ಳಲು ಅವಕಾಶಮದುವೆ ಸಮಾರಂಭಗಳಲ್ಲಿ ಗರಿಷ್ಠ 50 ಜನರಿಗೆ ಅವಕಾಶ ನೀಡಲಾಗಿದೆ.


Spread the love

About Karnataka Junction

    Check Also

    ಪ್ರಗತಿಯಲ್ಲಿರುವ ಜಿ +3 ಮನೆಗಳ ಕಾಮಗಾರಿಯ ವೀಕ್ಷಿಸಿದ ಬೆಲ್ಲದ

    Spread the loveಪ್ರಗತಿಯಲ್ಲಿರುವ ಜಿ +3 ಮನೆಗಳ ಕಾಮಗಾರಿಯ ವೀಕ್ಷಿಸಿದ ಬೆಲ್ಲದ ಹುಬ್ಬಳ್ಳಿ;ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ …

    Leave a Reply

    error: Content is protected !!