ಹೈದರಾಬಾದ್: ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಕೆಲವೊಂದು ರಾಜ್ಯಗಳಲ್ಲಿ ಇದರ ಆರ್ಭಟ ಜೋರಾಗಿದೆ. ಇದರಿಂದ ಹೊರಬರಲು ವಿವಿಧ ರಾಜ್ಯಗಳು ಮತ್ತೊಮ್ಮೆ ಲಾಕ್ಡೌನ್ ಮೊರೆ ಹೋಗುತ್ತಿವೆ. ಆದರೆ, ತೆಲಂಗಾಣದಲ್ಲಿ ಯಾವುದೇ ಕಾರಣಕ್ಕೂ ಲಾಕ್ಡೌನ್ ಹೇರುವುದಿಲ್ಲ ಎಂದು ಸಿಎಂ ಕೆಸಿಆರ್ ಹೇಳಿದ್ದಾರೆ.
ಲಾಕ್ಡೌನ್ ಹೇರಿಕೆ ಮಾಡುವುದರಿಂದ ಆರ್ಥಿಕತೆ ಮೇಲೆ ಹೊಡೆತ ಬೀಳಲಿದ್ದು, ಸಂಪೂರ್ಣ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಕೋವಿಡ್ ಸೋಂಕಿನಿಂದ ಗುಣಮುಖರಾದ ಬಳಿಕ ಮೊದಲ ಸಲ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಲಾಕ್ಡೌನ್ ಹೇರಿಕೆ ಮಾಡಿರುವ ರಾಜ್ಯಗಳ ಪರಿಸ್ಥಿತಿ ಪರಿಶೀಲನೆ ಮಾಡಿದ ಬಳಿಕ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.ಲಾಕ್ಡೌನ್ ಹೇರಿಕೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ತೆಲಂಗಾಣದಲ್ಲಿ ಇತರ ರಾಜ್ಯಗಳಿಂದ 25ರಿಂದ 30 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಲಾಕ್ಡೌನ್ ಹೇರಿಕೆ ಮಾಡಿದರೆ ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.
ಅಗತ್ಯ ವಸ್ತು, ಹಾಲು, ತರಕಾರಿ, ಹಣ್ಣು, ತುರ್ತು ವೈದ್ಯಕೀಯ ಸೇವೆ ಸರಬರಾಜು ನಿಲ್ಲಿಸಲು ಸಾಧ್ಯವಿಲ್ಲ. ಇತರ ರಾಜ್ಯಗಳಿಂದ ಲಸಿಕೆ, ಮೆಡಿಕಲ್ ಔಷಧ, ಚುಚ್ಚುಮದ್ದು ಸೇರಿ ಪ್ರಮುಖ ವಸ್ತು ಸರಬರಾಜು ಮಾಡಿಕೊಳ್ಳುತ್ತಿದ್ದೇವೆ. ಲಾಕ್ಡೌನ್ ಹೇರಿಕೆ ಮಾಡುವುದರಿಂದ ಪ್ಯಾನಿಕ್ ಸನ್ನಿವೇಶ ನಿರ್ಮಾಣಗೊಳ್ಳಲಿದೆ. ಹೀಗಾಗಿ ಸರ್ಕಾರ ಈ ನಿರ್ಧಾರ ಕೈಗೊಳ್ಳುವುದಿಲ್ಲ ಎಂದರು.ಕೋವಿಡ್ ಬಿಕ್ಕಟ್ಟಿಗೆ ತೆಲಂಗಾಣ ಕೈಗೊಂಡ ಕ್ರಮ
ರೆಮ್ಡೆಸಿವಿರ್ ತಯಾರಿಕೆ ಕಂಪನಿ ಜೊತೆ ಮಾತನಾಡಿ, ಹೆಚ್ಚಿನ ಪೂರೈಕೆಗೆ ಮನವಿಆಮ್ಲಜನಕ ಪೂರೈಕೆಗಾಗಿ 1 ಕೋಟಿ ರೂ. ವೆಚ್ಚದಲ್ಲಿ ಚೀನಾದಿಂದ 12 ಕ್ರಯೋಜೆನಿಕ್ ಟ್ಯಾಂಕರ್ ಆಮದುಕೊರೊನಾ ತಡೆಗಟ್ಟಲು ವಿಶೇಷ ಅಧಿಕಾರಿ ನೇಮಕಕೋವಿಡ್ ಮೊದಲ ಲಸಿಕೆ ತೆಗೆದುಕೊಂಡ ಎಲ್ಲರಿಗೂ ಎರಡನೇ ಡೋಸ್ ಆದ್ಯತೆ ಮೇಲೆ ನೀಡಲು ಕ್ರಮಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯಮದುವೆ, ವಿವಿಧ ಸಮಾರಂಭಗಳಲ್ಲಿ 100ಕ್ಕೂ ಹೆಚ್ಚು ಜನರು ಭಾಗಿಯಾಗುವಂತಿಲ್ಲ ಎಂದರು.
Check Also
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ
Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …