Breaking News

ಕೋವೀಡ್ ಗೆ ಶಂಖನಾಸ ಅರವಿಂದ ಬಲಿ- ದಿ.ಕಾಶಿನಾಥ್ ಆಪ್ತ

Spread the love

ಬೆಂಗಳೂರು: ಕೊರೊನಾ ಎಂಬ ಹೆಮ್ಮಾರಿ ಕನ್ನಡ ಚಿತ್ರರಂಗವನ್ನ ಬಿಡದಢ ಕಾಡುತ್ತಿದ್ದು ಈಗ ಖ್ಯಾತ ಹಾಸ್ಯ ನಟ, ಶಂಖನಾದ ಅರವಿಂದ ಬಲಿಯಾಗಿದ್ದಾರೆ.
ಚಿತ್ರರಂಗದ ಖ್ಯಾತ ನಿರ್ಮಾಪಕರು, ನಿರ್ದೇಶಕರು , ಕಲಾವಿದರು ಹಾಗು ತಂತ್ರಜ್ಞರ ಪ್ರಾಣವನ್ನ‌ ಕಸಿಯುತ್ತಿದೆ. ಈಗ ಅನುಭವ, ಬೆಟ್ಟದ ಹೂವು ಸಿನಿಮಾಗಳ ಖ್ಯಾತಿಯ ಶಂಖನಾದ ಅರವಿಂದ ಕೊರೊನಾಗೆ ಜೀವ ಬಿಟ್ಟಿದ್ದಾರೆ.70 ವರ್ಷದವರಾಗಿದ್ದ ಶಂಖನಾದ ಅರವಿಂದ್ ಕಳೆದ ಒಂದು ವಾರದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮಧ್ಯಾಹ್ನ ಉಸಿರಾಟದ ಸಮಸ್ಯೆಯಿಂದ ಶಂಖನಾದ ಅರವಿಂದ್
ಕೊನೆಯುಸಿರೆಳೆದಿದ್ದಾರೆ. ದಿವಗಂತ ಕಾಶಿನಾಥ್ ಆಪ್ತರಾಗಿದ್ದ ಶಂಖನಾದ ಅರವಿಂದ್ 250 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
ಪುನೀತ್ ರಾಜ್‍ಕುಮಾರ್ ಬಾಲ್ಯದಲ್ಲಿ ನಟಿಸಿದ್ದ ಬೆಟ್ಟದ ಹೂವು ಚಿತ್ರದಲ್ಲಿ ಶಂಖನಾದ ಅರವಿಂದ್ ಅದ್ಭುತ ಅಭಿನಯ ಮಾಡಿದ್ದರು. ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದ ಶಂಖನಾದ ಅರವಿಂದ್ ಇಬ್ಬರು ಹೆಣ್ಣು ಮಕ್ಕಳು ಹಾಗು ಒಬ್ಬ ಪುತ್ರನನ್ನ ಅಗಲಿದ್ದಾರೆ.


Spread the love

About gcsteam

    Check Also

    ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ

    Spread the loveಹುಬ್ಬಳ್ಳಿ- ರಾಮಲಿಂಗೇಶ್ವರ ದೇವಸ್ಥಾನ ಬಿ.ಆರ್.ಟಿ.ಎಸ್. ಯೋಜನೆಯ ಅನ್ವಯ ಸ್ಥಳಾಂತರ ಆಗುವ ವಿಷಯ ಬೇಸರದ ಸಂಗತಿ ಆದರೂ ಸರಕಾರ …

    Leave a Reply