ಹುಬ್ಬಳ್ಳಿ; ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ 5 ಸೋಂಕಿತರ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಎಂಬ ಆರೋಪ ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಲೈಪ್ ಲೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿಯೇ ಸಾವು ಎಂದು ಶಂಕೆ ವ್ಯಕ್ತವಾಗಿದ್ದು, ಆಕ್ಸಿಜನ್ ಕೊರತೆಯಿಂದಲೇ ಸಾವು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನೂ ಸ್ಥಳಕ್ಕೆ ಡಿ ಎಚ್ ಓ ಯಶವಂತ್ ಮದನಿಕರ ಸೇರಿದಂತೆ ಡಿಸಿಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನೂ ಸೋಂಕಿತರ ಸಾವಿನ ಬಗ್ಗೆ ವೈದ್ಯಕೀಯ ತನಿಖೆಯ ನಂತರವೇ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ಡಿಸಿಪಿ ಹೇಳಿದರೆ, ಡಿಹೆಚ್ ಮದನಿಕರ್ ಪ್ರತಿಕ್ರಿಯೆ ನೀಡಿದ್ದು,
ಬಹಳ ಜನ ಆಕ್ಸಿಜನ್ ನಿಂದ ಸಾವಾಗಿದೆ ಎನ್ನುತ್ತಿದ್ದಾರೆ.
ಆದ್ರೆ ಆಕ್ಸಿಜನ್ ಕೊರತೆಯಿಂದ
ಸಾವಾಗಿಲ್ಲ. ಮಧ್ಯಾಹ್ನ 3 ರಿಂದ ಇಲ್ಲಿಯವರೆಗೆ ಐದು ಜನ ಮೃತ ಪಟ್ಟಿದ್ದಾರೆ. ಒಂದು ಎಕ್ಸಪಟ್೯ ಕಮೀಟಿ ಮಾಡ್ತೇವೆ ತನಿಖೆ ಆದ ಮೇಲೆ ಹೇಳ್ತೆವೆ ಎಂದು ಡಿಹೆಚ್ ಓ ಯಶವಂತ ಮದಿನಕರ್ ಹೇಳಿದರು.
Check Also
ಗ್ರಾಹಕರಲ್ಲಿ ಗುಣಮಟ್ಟದ ವಸ್ತುಗಳ ಜಾಗೃತಿಗಾಗಿ ಕ್ವಾಲಿಟಿ ವಾಕ್
Spread the loveಹುಬ್ಬಳ್ಳಿ: ಇಲ್ಲಿಯ ಬ್ಯೂರೋ ಆಫ್ ಇಂಡಿಯನ್ ಸ್ಟಶ್ಚಯಂಡರ್ಡ್ಸ್ (ಬಿಐಎಸ್) ಶಾಖೆ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಕ್ವಾಲಿಟಿ ವಾಕ್‌ಗೆ …