Breaking News

ಮಠದ ಬಾಗಿಲಕ್ಕೆ ಬಿಜೆಪಿ ಕಾಂಗ್ರೆಸ್ ವೀರ ಪಕ್ಷಗಳ ನಾಮಫಲಕಗಳನ್ನು ಹಾಕಿಕೊಳ್ಳಿ—- ಲಿಂಗಾಯತ ಮುಖಂಡ ಗಂಗಾಧರ ದೊಡ್ಡವಾಡ

Spread the love

ರಾಜಕೀಯ ಪಕ್ಷ ಮತ್ತು ರಾಜಕೀಯ ಚಟುವಟಿಕೆಗಳಿಂದ ದೂರವಿದ್ದು ಬಸವಕಾಲದ ಗುರುಕುಲ ಸಂಸ್ಕೃತಿ ಗುರುಭಕ್ತಿ ಸಂಸ್ಕಾರ ನೀಡಿ ಅನ್ನದಾಸೋಹ ಜ್ಞಾನದಾಸೋಹ ಅನಾಥರಿಗೆ ಆಸರೆ ನೀಡುತ್ತಾ ಬಂದಿರುವ ಮಠಮಾನ್ಯಗಳು ಇಂದು ರಾಜಕೀಯ ಚಪಲತೆಗೆ ಒಳಗಾಗಿ ಒಂದೊಂದು ಪಕ್ಷದ ಬೆನ್ನು ಬಿದ್ದಿರುವುದಲ್ಲದೇ ಮೂಲ ಸಿದ್ಧಾಂತವನ್ನು ಗಾಳಿಗೆ ತೂರಿ ವೀರಶೈವ ಲಿಂಗಾಯತ ಸಮಾಜವನ್ನುಅಪಹಾಸ್ಯಕ್ಕೆ ಗುರಿ ಮಾಡಿತ್ತಿದ್ದುದು ದುರಂತವೆಂದೇ ಹೇಳಬೇಕಾಗುತ್ತದೆ ಎಂದು ಲಿಂಗಾಯತ ಮುಖಂಡ ಗಂಗಾಧರ ದೊಡ್ಡವಾಡ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು ಕಲಘಟಗಿಯ ಹನ್ನೆರಡು ಮಠದಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ಶ್ರೀಗಳು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕೆಂದು, ಹೇಳಿ ಮಠದಲ್ಲೇ ಬಿಜೆಪಿ ಮುಖಂಡರುಗಳ ಸಮ್ಮುಖದಲ್ಲಿ ಭಾಷಣಕ್ಕೆ ಅವಕಾಶ ಕೊಟ್ಟಿರುವುದು ಕೂಡಾ ಸಮಾಜಕ್ಕೆ ಮಾಡಿದ ದ್ರೋಹವಾಗಿದೆ ಒಂದೆಡೆಯಾದರೆ ವೀರಶೈವ ಲಿಂಗಾಯತ ಸಮಾಜದ ದಿಂಗಾಲೇಶ್ವರ ಶ್ರೀಗಳು ವೀರಶೈವ ಲಿಂಗಾಯತರಿಗೆ ರಾಜಕೀಯ ಪಕ್ಷಗಳಿಂದ ಅನ್ಯಾಯವಾಗಿದೆ ಎಂದು ಘೋಷಣೆ ಮೊಳಗಿಸಿ ಲೋಕಸಭಾ ಅಖಾಡಕ್ಕೆ ಇಳಿದಿರುವುದು ಮತ್ತೊಂದು ಕಡೆಯಾಗಿದೆ ಮಠಾಧೀಶರಾದವರು ಸಮಾಜದಲ್ಲಿನ ಅಂಕು ಡೊಂಕು ಗಳನ್ನು ತಿದ್ದಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವ ಹೊಣೆ ಹೊತ್ತು ಇಂದು ತಮ್ಮಿಚ್ಛೆಯಂತೆ ನಡೆದುಕೊಳ್ಳುತ್ತಿದ್ದಾರೆ ಇತ್ತೀಚಿನ ದಿನಗಳಲ್ಲಿ ವೀರಶೈವ ಲಿಂಗಾಯತ ಮಠಾಧೀಶರೇ ಹೆಚ್ಚಿನ ರಾಜಕೀಯ ಚರ್ಚೆಯಲ್ಲಿ ಭಾಗವಹಿಸುತ್ತಿದ್ದು ಇದೊಂದು ಸಮಾಜಕ್ಕೆ ಆಗುತ್ತಿರುವ ಒಂದು ದೊಡ್ಡ ಅನ್ಯಾಯ ಮತ್ತು ಕಂಟಕವೆಂದೂ ತೀವ್ರ ವಿಷಾದದಿಂದ ಗಂಗಾಧರ ದೊಡವಾಡ ಹೆೇಳಿದ್ದಾರೆ.


Spread the love

About Karnataka Junction

    Check Also

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕಾವೇಂಶ್ರೀ ನೇತೃತ್ವದಲ್ಲಿ ಸನ್ಮಾನ

    Spread the loveಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕಾವೇಂಶ್ರೀ ನೇತೃತ್ವದಲ್ಲಿ ಸನ್ಮಾನ ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ …

    Leave a Reply

    error: Content is protected !!