ಕಾಸಿಗಾಗಿ ಸುದ್ದಿ ಕುರಿತು ಪತ್ರಕರ್ತರ ಕಾರ್ಯಾಗಾರದಲ್ಲಿ ಚುನಾವಣಾಧಿಕಾರಿ ಮಾಹಿತಿ

Spread the love

ಹುಬ್ಬಳ್ಳಿ:ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ `ಇ-ಪೇಪರ್’ಗಳೂ ಕೂಡ ರಾಜಕೀಯ ಜಾಹೀರಾತು ಪ್ರಕಟಿಸಲು
ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ ಗುರುವಾರ ತಿಳಿಸಿದರು.`ಕಾಸಿಗಾಗಿ ಸುದ್ದಿ’ ಕುರಿತು ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ (ಎಂಸಿಎAಸಿ) ಕರ್ತವ್ಯಗಳನ್ನು ತಿಳಿಸಲು ಪತ್ರಕರ್ತರಿಗಾಗಿ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. `ಮುದ್ರಣ ಮಾಧ್ಯಮಗಳು ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸುವುದಕ್ಕೆ ಪ್ರಚಾರ ಮುಕ್ತಾಯದವರೆಗೆ ಅನುಮತಿ ಪಡೆದುಕೊಳ್ಳಬೇಕಾಗಿಲ್ಲ. ಮತದಾನಕ್ಕೆ ಕೊನೇ ಎರಡು ದಿನಗಳಿರುವಾಗ ಪ್ರಕಟವಾಗುವ ರಾಜಕೀಯ ಜಾಹೀರಾತುಗಳಿಗೆ ಮಾತ್ರ ಅನುಮತಿ
ಪಡೆದುಕೊಳ್ಳಬೇಕು. `ಆದರೆ ಇ-ಪತ್ರಿಕೆಗಳು, ವಿವಿಧ ಸಾಮಾಜಿಕ ಮಾಧ್ಯಮಗಳು, ಕೇಬಲ್ ನೆಟ್‌ವರ್ಕ್ಗಳು,
ದೃಶ್ಯ ಮಾಧ್ಯಮಗಳು, ಪಾಡ್‌ಕಾಸ್ಟ್ಗಳು, ವೆಬ್‌ಕಾಸ್ಟ್ಗಳು ಸೇರಿದಂತೆ ಉಳಿದೆಲ್ಲ ಮಾಧ್ಯಮಗಳೂ ಪ್ರಕ್ರಿಯೆಯ ಉದ್ದಕ್ಕೂ ಅನುಮತಿ ಪಡೆದುಕೊಂಡೇ ಪ್ರಕಟಿಸಬೇಕು’ ಎಂದು
ವಿವರಿಸಿದರು. ಬಹುತೇಕ ಮುದ್ರಣ ಮಾಧ್ಯಮಗಳೆಲ್ಲ `ಇ-ಪೇಪರ್’ ಹೊಂದಿವೆ. ದಿನಪತ್ರಿಕೆಗಳ ಆಯಾ ದಿನದ
ಇ-ಪೇಪರ್ ಕೂಡ ಮುಂಜಾನೆಯೇ ಓದುಗರಿಗೆ ಲಭಿಸುತ್ತದೆ. ಹೀಗಿರುವಾಗ ಮುದ್ರಣ ಮಾಧ್ಯಮಕ್ಕೆ ಎಲ್ಪ ಪ್ರಕ್ರಿಯೆ ವೇಳೆ ಅನುಮತಿ ಅವಶ್ಯವಿಲ್ಲ ಎಂದು ಹೇಳಿ, ಇ-ಪೇಪರ್‌ಗೆ ಅನುಮತಿ ಪಡೆಯಬೇಕು ಎನ್ನುವುದು ಗೊಂದಲಕಾರಿಯಲ್ಲವೇ? ಎಂಬ ಪ್ರಶ್ನೆ ಚುನಾವಣಾಧಿಕಾರಿಗಳಿಗೆ ಎದುರಾಯಿತು. `ಯಾವೆಲ್ಲ ಪತ್ರಿಕೆಗಳು ಇ ಪೇಪರ್ ಹೊಂದಿವೆಯೋ ಅವೆಲ್ಲವೂ ಅನುಮತಿ ಪಡೆಯಲೇಬೇಕು
ಎಂಬುದನ್ನು ಪ್ರಸಕ್ತ ವರ್ಷದಿಂದ ಆಯೋಗ ಕಡ್ಡಾಯಗೊಳಿಸಿದೆ. ಇ ಪೇಪರ್ ಕೂಡ ಸಾಮಾಜಿಕ ಜಾಲತಾಣ ಸಂವಹನದ ಭಾಗವೇ ಆಗಿರುವುದರಿಂದ ಆಯೋಗ ಈ ಕ್ರಮ ಕೈಗೊಂಡಿದೆ’ ಎಂದು ದಿವ್ಯ
ಪ್ರಭು ವಿವರಿಸಿದರು.
ಪತ್ರಿಕೆಗಳಲ್ಲಿ ಪ್ರಕಟವಾಗುವ ರಾಜಕೀಯ ಪಕ್ಷ ಅಥವಾ ವ್ಯಕ್ತಿಗಳ ಪರವಾಗಿ ಅಭಿಪ್ರಾಯ
ರೂಪಿಸುವಂತಹ, ಹೊಗಳುವಂತಹ ಮತ್ತು ಕೇಂದ್ರೀಕರಿಸುವAತಹ ಎಲ್ಲ ಬರಹಗಳು ಮತ್ತು
ಶೀರ್ಷಿಕೆಗಳು (ಹೆಡ್ಡಿಂಗ್) `ಕಾಸಿಗಾಗಿ ಸುದ್ದಿ’ ಮಾನದಂಡದ ಅಡಿ ಬರುತ್ತವೆ. ಆದರೆ
ಪತ್ರಿಕಾಗೋಷ್ಠಿಗಳು ಅಥವಾ ಹೇಳಿಕೆಗಳು ಈ ವ್ಯಾಪ್ತಿಗೆ ಬರುವುದಿಲ್ಲ ಎಂದು
ಸ್ಪಷ್ಟಪಡಿಸಿದರು.
ಬಹಿರಂಗ ಪ್ರಚಾರಕ್ಕೆ ಬಳಸುವ ಮುದ್ರಿತ ಸಾಮಗ್ರಿಗಳ ಮೇಲೆ ಮುದ್ರಕರ ಮತ್ತು ಪ್ರಚಾರಕರ
ಹೆಸರು ಮತ್ತು ವಿಳಾಸಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಮುದ್ರಿತ ಪ್ರತಿಯ ನಾಲ್ಕು
ನಕಲು ಪ್ರತಿಗಳನ್ನು ಮುದ್ರಿಸಿದ ೩ ದಿನಗಳ ಒಳಗೆ ಸಂಬAಧಿಸಿದ ಚುನಾವಣಾಧಿಕಾರಿಗಳಿಗೆ
ಸಲ್ಲಿಸಬೇಕು ಎಂದು ಚುನಾವಣಾಧಿಕಾರಿ ತಿಳಿಸಿದರು.
ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ, ಪಾಲಿಕೆ
ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಉಪಸ್ಥಿತರಿದ್ದರು.

ಇವಿಎಂ- ಸುಳ್ಳು ನಿರೂಪಣೆಗಳು
ಇವಿಎಂ ಕುರಿತು ಹತ್ತು ಹಲವು ಸುಳ್ಳುಗಳು ಮತ್ತು ಕಟ್ಟೆ ಹರಟೆಗಳು ನಡೆಯುತ್ತವೆ.
ಇವ್ಯಾವುಗಳೂ ನಿಜವಲ್ಲ. ಆದ್ದರಿಂದ ಜನತೆ ಇವಿಎಂ ಕುರಿತು ತಪ್ಪು ಅಭಿಪ್ರಾಯವನ್ನು
ರೂಪಿಸಿಕೊಳ್ಳಬಾರದು ಎಂದು ಸಹಾಯಕ ಚುನಾವಣಾಧಿಕಾರಿ ಡಾ.ಸಿದ್ದು ಹುಲ್ಲೊಳ್ಳಿ ಮನವಿ
ಮಾಡಿದರು.
ಕಾರ್ಯಾಗಾರದಲ್ಲಿ ಪಿಪಿಟಿ ಮೂಲಕ ಒಟ್ಟಾರೆ ನೀತಿ ಸಂಹಿತೆಯನ್ನು ವಿವರಿಸಿದ ಅವರು,
`ಇವಿಎಂ ಹ್ಯಾಕ್ ಮಾಡಬಹುದು ಹಾಗೂ ಯಾರಿಗೋ ಹಾಕಿದ ಮತ ಇನ್ಯಾರಿಗೋ ಹೋಗುತ್ತದೆ ಎನ್ನುವ
ಮಾತುಗಳು ಸಂಪೂರ್ಣ ಸುಳ್ಳು’ ಎಂದು ಹೇಳಿದರು.
`ಬಟನ್ ಒತ್ತಿದ ಮೇಲೆ ತಾವು ಚಲಾಯಿಸಿದವರಿಗೇ ಮತ ಹೋಗಿದೆಯೋ ಇಲ್ಲವೋ ಎಂಬುದನ್ನು
ತಿಳಿದುಕೊಳ್ಳಲು ೧೨ ಸೆಕೆಂಡುಗಳ ಕಾಲ ಅವಕಾಶ ಇರುತ್ತದೆ. ಒಂದು ವೇಳೆ ಚಲಾಯಿಸಿದ
ಅಭ್ಯರ್ಥಿಗೆ ಬಿಟ್ಟು ಬೇರೆಯವರಿಗೆ ಮತ ಹೋಗಿದ್ದರೆ, ಪ್ರಶ್ನಿಸಲು ಅವಕಾಶ ಇದೆ.
`ಪ್ರಶ್ನಿಸಿದ ಮತದಾರನಿಗೆ ನಿಯಮಾನುಸಾರ ಇನ್ನೊಮ್ಮೆ ಮತದಾನಕ್ಕೆ ಅವಕಾಶ
ಮಾಡಿಕೊಡಲಾಗುತ್ತದೆ. ಮತದಾರ ಹೇಳಿದ್ದು ಸುಳ್ಳೆಂದು ಸಾಬೀತಾದರೆ ಆರು ತಿಂಗಳು ಜೈಲು
ಶಿಕ್ಷೆ ಅನುಭವಿಸಬೇಕಾಗುತ್ತದೆ. ಆರೋಪದಲ್ಲಿ ಸತ್ಯಾಂಶ ಇದ್ದರೆ ಸಂಬAಧಿಸಿದ ಬೂತ್‌ನ
ಚುನಾವಣೆ ಸ್ಥಗಿತವಾಗುತ್ತದೆ.
`೨೦೧೮ರಲ್ಲಿ ಈ ಕಾನೂನು ಜಾರಿಗೆ ಬಂದಿದೆ. ತಾವು ಚಲಾಯಿಸಿದ ಮತ ಬೇರೆಯವರಿಗೆ ಹೋಗಿದೆ
ಎಂದು ಮತಗಟ್ಟೆ ಚುನಾವಣಾಧಿಕಾರಿಗೆ ತಿಳಿಸಿ, ಇವಿಎಂ ಪ್ರಶ್ನಿಸಿ ಇನ್ನೊಮ್ಮೆ ಮತದಾನ
ಮಾಡುವ ಅವಕಾಶವನ್ನು ಇದುವರೆಗೆ ಒಬ್ಬರೂ ಬಳಸಿಕೊಂಡಿಲ್ಲ. ಅಂದರೆ ಈ ವ್ಯವಸ್ಥೆಯ
ಪಾರದರ್ಶಕತೆ ಅರ್ಥವಾಗುತ್ತದೆ’ ಎಂದು ಹುಲ್ಲೊಳ್ಳಿ ಹೇಳಿದರು.


Spread the love

Leave a Reply

error: Content is protected !!