ಧಾರವಾಡ ಜಿಲ್ಲೆಯ ಪ್ರತಿ ಹಳ್ಳಿಗೂ ಒಂದೂವರೆ ವರ್ಷದಲ್ಲಿ ಮಲಪ್ರಭಾ ನೀರು ಕೊಟ್ಟೇ ಕೊಡುವೆ*

Spread the love

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಇಡೀ ಜಿಲ್ಲೆಗೆ ಇನ್ನು ಒಂದೂವರೆ ವರ್ಷದೊಳಗೆ ಮಲಪ್ರಭಾ ನೀರು ಕೊಟ್ಟೇ ಕೊಡುವೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಘೋಷಿಸಿದರು.
ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.
ಮಲಪ್ರಭಾ ಕುಡಿಯುವ ನೀರು ಯೋಜನೆ ಕೈಗೊಳ್ಳಲು ಆಗಲೇ ಟೆಂಡರ್ ಕರೆಯಲಾಗಿದೆ. ಇನ್ನು, ಒಂದು ಅಥವಾ ಒಂದೂವರೆ ವರ್ಷದಲ್ಲಿ ಇಡೀ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗೂ ಮಲಪ್ರಭೆ ನೀರು ಹರಿಯಲಿದೆ ಎಂದು ಹೇಳಿದರು.
ಜಲಜೀವನ್ ಯೋಜನೆಯಡಿ 1200 ಕೋಟಿ ರು.ವೆಚ್ಚದಲ್ಲಿ ಮಲಪ್ರಭಾ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಮನೆಗೂ ಈ ನೀರು ಕೊಟ್ಟೇ ಕೊಡುತ್ತೇನೆ ಎಂದು ಸಚಿವ ಜೋಶಿ ಭರವಸೆ ನೀಡಿದರು.

ಎಂ.ಆರ್.ಪಾಟೀಲ್ ಅವರು ಕಾಳಜಿ ತೋರಿ ಏನಾದರು ಮಾಡಿ ನಮ್ಮ ಜಿಲ್ಲೆಗೂ ಜಲಜೀವನ್ ಯೋಜನೆ ತನ್ನಿ ಎಂದು ಪ್ರಸ್ತಾಪ ಮುಂದಿಟ್ಟರು. ಕೊನೆಗೆ ಪ್ರಧಾನಿ ಮುಂದೆ ಪ್ರಾಜೆಕ್ಟ್ ರಿಪೋರ್ಟ್ ಇರಿಸಿ ಮನವಿ ಮಾಡಿದೆ. ಮೋದಿ ಅವರು ಕ್ಷಣಾರ್ಧದಲ್ಲೇ ಒಪ್ಪಿಗೆ ಸೂಚಿಸಿದರು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಹಂತದ ಜಲಜೀವನ್ ಯೋಜನೆಯಲ್ಲೇ ನಮ್ಮ ಧಾರವಾಡ ಜಿಲ್ಲೆಯನ್ನು ಸೇರ್ಪಡೆ ಮಾಡಿದರು. ಅದರ ಪರಿಣಾಮ ಇಂದು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನೀಗುತ್ತಿದೆ ಎಂದು ತಿಳಿಸಿದರು.

*ತಾಯಂದಿರ ಮೇಲೆ ಮೋದಿಜಿಗೆ ಅಪಾರ ಪ್ರೀತಿ:* ಪ್ರಧಾನಿ ಮೋದಿ ಅವರು ಬಾವಿಯಿಂದ ನೀರು ಸೇದು ತಂದು ಕಷ್ಟಪಟ್ಟು ತಮ್ಮನ್ನು ಬೆಳೆಸಿದ ದೃಶ್ಯವನ್ನು ಒಮ್ಮೆ ಕಣ್ತುಂಬಿಕೊಂಡು ತಾಯಂದಿರು ಎದುರಿಸುತ್ತಿರುವ ನಿರೀನ ಬವಣೆ ನೀಗಿಸಲೆಂದೇ *ಜಲ ಜೀವನ್* ಅನುಷ್ಠಾನಗೊಳಿಸಿದರು ಎಂದು ಜೋಶಿ ಸ್ಮರಿಸಿದರು.

*ಸರ್ಕಾರೇತರ ಸಂಸ್ಥೆಗಳನ್ನೂ ಅಭಿವೃದ್ಧಿಯಲ್ಲಿ ತೊಡಗಿಸಿದೆ:*
ಕಲ್ಲಿದ್ದಲು ಗಾಣಿಗಾರಿಕೆ ಕಂಪನಿಗಳನ್ನು ಸಹ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿದ್ದೇನೆ. ಪ್ರಧಾನಿ ಮೋದಿ ಅವರ ಆಶಯ, ಅಣತಿಯಂತೆ ನಯಾ ಪೈಸೆ ಭ್ರಷ್ಟಾಚಾರಕ್ಕೆ ಇಳಿಯದೆ ಹಣ ಕೊಡಲು ಬಂದ ಗಣಿ ಕಂಪನಿಗಳನ್ನು ಶಾಲೆ, ಆಸ್ಪತ್ರೆ ಅಭಿವೃದ್ಧಿಯಂತಹ ಸೇವೆಗೆ ಪ್ರೇರೇಪಿಸಿ ಕೋಟ್ಯಂತರ ರೂಪಾಯಿ ಅನುದಾನ ಕೊಡಿಸಿದ್ದೇನೆ ಎಂದು ಜೋಶಿ ತಿಳಿಸಿದರು.


Spread the love

Leave a Reply

error: Content is protected !!