ಧಾರವಾಡ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ದ ಉತ್ತರ ಕೊಡುವಷ್ಟು ಮಟ್ಟಕ್ಕೆ ನಾವು ಬೆಳೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಈಗ ರಾಷ್ಟ್ರದ ನಾಯಕರು. ಅವರ ವಿರುದ್ಧ ಮಾತನಾಡುವುದರಲ್ಲಿ ಅರ್ಥವಿಲ್ಲ. ತುಮಕೂರಿನಲ್ಲಿ ಸ್ಪರ್ಧೆ ಮಾಡಲು ಒಪ್ಪಿಸಲು ದೇವೇಗೌಡರಿಗೆ ಮಾರ್ಗದರ್ಶನ ಮಾಡಿದರೆ ಒಪ್ಪುತ್ತಾರಾ? ಒಪ್ಪುವಷ್ಟು ಮುಗ್ಧರು ಅವರೇನೂ ಅಲ್ಲ, ಚುನಾವಣೆಗೆ ನಿಲ್ಲಬೇಕಾ? ಬೇಡ ಅದು ವೈಯಕ್ತಿಕ ನಿರ್ಧಾರ. ಇದಲ್ಲದೇ ಈಗ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿರುವ ದೇವೇಗೌಡರರ ಆರೋಪಗಳಿಗೆ ಏನು ಹೇಳಬೇಕೆಂಬುದು ಗೊತ್ತಿಲ್ಲ ಎಂದರು.
ಸಿ.ಪಿ. ಯೋಗೀಶ್ವರ ಪುತ್ರಿ ಕೈ ಸೇರ್ಪಡೆ ವಿಚಾರದಲ್ಲಿ ಮಾತನಾಡಿದ ಲಾಡ್, ಯೋಗೀಶ್ವರ ಕಾಂಗ್ರೆಸ್‌ಗೆ ಬಂದರೂ ಒಳ್ಳೆಯದೇ. ಯೋಗೀಶ್ವರ ಪುತ್ರಿ ಬರುತ್ತಿರುವುದು ಒಳ್ಳೆಯದು. ನಮ್ಮ ಪಕ್ಷಕ್ಕೆ ಬರ ಮಾಡಿಕೊಳ್ಳುತ್ತೇವೆ, ಅನೇಕರು ಕಾಂಗ್ರೆಸ್‌ಗೆ ಬರಲಿದ್ದಾರೆ. ಆದರೂ ಮುಂದೆ ಯೋಗೀಶ್ವರ ಅವರು ಬಂದರೂ ಒಳ್ಳೆಯದು. ಯಾರೇ ಕಾಂಗ್ರೆಸ್‌ಗೆ ಬಂದರೂ ನಮಗೆ ಬಲ ಬಂದಂತೆ ಆಗುತ್ತದೆ ಎಂದರು.
ದಿಂಗಾಲೇಶ್ವರ ಹೇಳಿಕೆಗಳನ್ನು ನಾನು ಗಮನಿಸುತ್ತಿದ್ದೇನೆ. ಅವರು ರಾಜಕೀಯದಲ್ಲಿ ನಿಲ್ಲುತ್ತಾರೆ ಎಂಬುದರ ಬಗ್ಗೆ ಗೊತ್ತಿಲ್ಲ. ಆದರೆ ದಿಂಗಾಲೇಶ್ವರ ಸ್ವಾಮೀಜಿ ಪ್ರಭಾವ ಬಹಳ ಇದೆ. ಕೇವಲ ಧಾರವಾಡ ಜಿಲ್ಲೆಗೆ ಸೀಮಿತವಾಗಿಲ್ಲ, ನಾನೂ ಕೂಡ ದಿಂಗಾಲೇಶ್ವರರ ಅಭಿಮಾನಿ. ಜನ ಅವರನ್ನು ಹಿಂಬಾಲಿಸುತ್ತಾರೆ. ನಾವು ಸಹ ಅನೇಕ ಮಠಾಧಿಶರನ್ನು ಭೇಟಿಯಾಗುತ್ತಿದ್ದೇವೆ ಎಂದ ಲಾಡ್, ಮುರುಘಾಮಠ ಸ್ವಾಮೀಜಿ ದ್ವಂದ್ವ ನಿಲುವು ವಿಚಾರವಾಗಿ ಅದರ ಬಗ್ಗೆ ಅವರೇ ಹೇಳಬೇಕು. ಇದೆಲ್ಲದರ ಬಗ್ಗೆ ನಾನು ಮಾತನಾಡೋದೇ ಕಠಿಣ ಎಂದರು.ಕೇಂದ್ರ ಸಚಿವ ಜೋಶಿಯವರೇನು ಲಿಂಗಾಯತರಲ್ಲ. ನಮ್ಮ ಪಕ್ಷವು ಈ ಹಿಂದಿನಿಂದಲೂ ಬೇರೆ ಬೇರೆ ಸಮುದಾಯವರನ್ನು ಗೆಲ್ಲಿಸಿದ್ದಾರೆ. ಜೋಶಿ ಮತ್ತು ಡಿ.ಕೆ. ನಾಯ್ಕರ ಗೆದ್ದಿದ್ದಾರೆ, ಎಲ್ಲ ಸಮಾಜಗಳಿಗೆ ಟಿಕೆಟ್ ಕೊಡುವ ಪಕ್ಷ ಕಾಂಗ್ರೆಸ್ ಪಕ್ಷ ಎಂದರು.
Check Also
ರಾಜ್ಯ ಸರ್ಕಾರದಲ್ಲಿ ತುಷ್ಟೀಕರಣ ಮೀತಿಮೀರಿದೆ- ಶಾಸಕ ಮಹೇಶ್ ಟೆಂಗಿನಕಾಯಿ
Spread the loveಹುಬ್ಬಳ್ಳಿ:ಬೆಂಗಳೂರಿನಲ್ಲಿ ಹಸು ಕೆಚ್ಚಲು ಕೊಯ್ಲು ವಿಚಾರ ಅತ್ಯಂತ ಕ್ರೂರತನದಿಂದ ಕೂಡಿದ್ದು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ …