ಪ್ರಲಾದ ಜೋಶಿ ಅವರಿಗೆ ನಮ್ಮಿಂದ ಯಾವುದೇ ವಿರೋಧವಿಲ್ಲ- ಶ್ರೀ ಗುರುಸಿದ್ದ ರಾಜಯೋಗೀಂದ್ರ

Spread the love

ಹುಬ್ಬಳ್ಳಿ: ಶ್ರೀ ಜಗದ್ಗುರು ಮೂರುಸಾವಿರ ಮಠವು ಪಕ್ಷಾತೀತವಾಗಿದ್ದು ರಾಜಕೀಯ ದಿಂದ ದೂರವಿದೆ ಎಂದು ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮಿಗಳು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಠಕ್ಕೆ ಎಲ್ಲ ಪಕ್ಷಗಳ ರಾಜಕಾರಣಿ ಗಳು ಬರುತ್ತಾರೆ, ಆಶೀರ್ವಾದ ಪಡೆಯುತ್ತಾರೆ. ಎಲ್ಲ ಪಕ್ಷಗಳೂ ಸಮಾನ. ಎಲ್ಲರನ್ನೂ ಸಮಭಾವದಿಂದ ಕಾಣುವ ಸದ್ಭಾವನೆ ಮಠದ್ದಾಗಿದೆ. ರಾಜಕೀಯ
ಮಠದಿಂದ ಬಂದಿಲ್ಲ ಮತ್ತು ಬರುವುದೂ ಇಲ್ಲ. ತಮ್ಮ ತಮ್ಮ ಅಭ್ಯರ್ಥಿಗಳ ಆಯ್ಕೆ ಆಯಾ ಪಕ್ಷಗಳ ವರಿಷ್ಠರ ಮತ್ತು ಕಾರ್ಯಕರ್ತರ ನಿರ್ಧಾರ. ಅದೇ ರೀತಿ ಕೇಂದ್ರ ಸಚಿವ ಪ್ರಲಾದ ಜೋಶಿ ಅವರಿಗೆ ನಮ್ಮಿಂದ ಯಾವುದೇ ವಿರೋಧವಿಲ್ಲ. ಅವರ ಮತ್ತು ನಮ್ಮ ಮಧ್ಯೆ ಉತ್ತಮ ಬಾಂಧವ್ಯವಿದೆ. ಜೋಶಿ ಅವರೂ ಮಠದೊಡನೆ ಸೌಹಾರ್ದ ಸಂಬಂಧ ಹೊಂದಿದ್ದಾರೆ ಎಂದಿದ್ದಾರೆ.


Spread the love

Leave a Reply

error: Content is protected !!