ಆಟೊರಿಕ್ಷಾದಲ್ಲಿ ಉಚಿತವಾಗಿ ಕುಡಿಯುವ ನೀರಿನ ಉಚಿತ ವ್ಯವಸ್ಥೆ

Spread the love

ಹುಬ್ಬಳ್ಳಿ: ಅಟೋ ಚಾಲಕರ ವರ್ತನೆ ಅವರ ನಡೆ ನುಡಿ ಕುರಿತು ಹಗುರವಾಗಿ ಮಾತನಾಡುವವರೇ ಬಹಳ ಜನ.‌ ಇಂತಹ ಸಂದರ್ಭದಲ್ಲಿ ಅಟೋ ಚಾಲಕರ ಮಾನವೀಯತೆಯ ಸೇವೆಯಿಂದ ಇಲ್ಲೊಬ್ಬ ಅಟೋ ಚಾಲಕರು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಹೌದು.. ನಗರದ ವೀರಾಪುರ ಓಣಿಯ ಆಟೊರಿಕ್ಷಾ ಚಾಲಕ ನಾಗರಾಜ ಗಬ್ಬೂರ ಅವರು ತಮ್ಮ ಆಟೊರಿಕ್ಷಾದಲ್ಲಿ ಕುಡಿಯುವ ನೀರಿನ ಉಚಿತ ವ್ಯವಸ್ಥೆ ಕಲ್ಪಿಸಿದ್ದಾರೆ. ಇದು ಹಲವು ಆಟೊರಿಕ್ಷಾ ಚಾಲಕರಿಗೆ ಮಾದರಿ ಆಗಿದೆ.
ಇಲ್ಲಿನ ಸಿದ್ಧಾರೂಢ ಮಠದ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉತ್ತರ ಕರ್ನಾಟಕ ಅಟೊ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ನೇತೃತ್ವ ವಹಿಸಿದ್ದರು.
‘ಬಾಯಾರಿದವರಿಗೆ ನೀರು ನೀಡುವುದು ಕರ್ತವ್ಯ, ಸಂಸ್ಕೃತಿಯೂ ಹೌದು. 2016ರಿಂದ ಆಟೊರಿಕ್ಷಾದಲ್ಲಿ ನೀರಿನ ಕ್ಯಾನ್‌ ಅಳವಡಿಸಿಕೊಂಡು ಜನರಿಗೆ ಉಚಿತವಾಗಿ ನೀರು ಹಂಚುತ್ತಿರುವೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ನನ್ನಿಂದ ಪ್ರೇರಿತರಾಗಿ ಇನ್ನೂ 14 ಆಟೊರಿಕ್ಷಾ ಚಾಲಕರು ಉಚಿತ ನೀರಿನ ಸೇವೆ ಆರಂಭಿಸಿದ್ದು ಖುಷಿ ಕೊಟ್ಟಿದೆ. ಅವರೆಲ್ಲರಿಗೆ ಕ್ಯಾನ್‌ ಅಳವಡಿಸುವ ಸ್ಟ್ಯಾಂಡ್‌ ನಿರ್ಮಿಸಿ ಕೊಟ್ಟಿದ್ದು ಅವರ ಜನಪರ‌ ಸೇವೆಗೆ ಹಿಡಿದ ಕನ್ನಡಿ ಆಗಿದೆ.
‘ಪ್ರತಿದಿನ ಮೂರರಿಂದ ನಾಲ್ಕು ಕ್ಯಾನ್‌ ನೀರು ಖಾಲಿ ಆಗುತ್ತದೆ. ಶುದ್ಧ ಕುಡಿಯುವ ನೀರನ್ನೇ ಒದಗಿಸುತ್ತೇನೆ. ಪ್ರತಿ ಕ್ಯಾನ್‌ಗೆ ₹5 ಖರ್ಚು ಆಗುತ್ತದೆ. ಅದೇನೂ ಹೊರೆಯಲ್ಲ. ಸೇವೆ ಮುಖ್ಯ. ನೀರು ಕುಡಿದವರೆಲ್ಲರೂ ನನ್ನ ಆಟೊರಿಕ್ಷಾದಲ್ಲಿ ಬರುತ್ತಾರೆ ಎಂಬ ನಿರೀಕ್ಷೆ ಇಲ್ಲ. ಪ್ರಯಾಣಿಕರು ಅಲ್ಲದೇ ಯಾರಾದರೂ ನೀರು ಕುಡಿಯಬಹುದು’ ಎನ್ನುತ್ತಾರೆ ನಾಗರಾಜ .‌ಇವರ ಸೇವೆ ಇನ್ನಷ್ಟು ಹೆಚ್ಚಾಗಿ ಮುಂದುವರಿಯಲಿ.


Spread the love

Leave a Reply

error: Content is protected !!