ಹುಬ್ಬಳ್ಳಿ : ನಗರದ ಉಪನಗರ, ಗೋಕುಲ ರಸ್ತೆ ಸೇರಿದಂತೆ ವಿವಿಧ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಜನತಾ ಕರ್ಫ್ಯೂ ಅವಧಿಯಲ್ಲಿ ಅನಾವಶ್ಯಕವಾಗಿ ತಿರುಗಾಟ ನಡೆಸಿದ ಸುಮಾರು 270 ಕ್ಕೂ ಹೆಚ್ಚು ಆಟೋಗಳನ್ನು ಪೊಲೀಸರು ವಶಪಡಿಸಿಕೊಂಡು ಗೋಕುಲ ರಸ್ತೆಯ ಗೋಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ,
ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಗೋಕುಲ ರಸ್ತೆ ಸೇರಿದಂತೆ ವಿವಿದೆಡೆ ಕೋವಿಡ್ ಜನತಾ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ವಾಹನಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಕೇಲ ಆಟೋಗಳಿಗೆ ದಂಡ ವಿಧಿಸಿದ್ದಾರೆ.
ಈ ನಡುವೆ ಮಹಮಾರಿ ಕರೋನಾ ಸಹ ಬಡತನ ಮುಂದೆ ಏನು ಅಲ್ಲಾ ಅಂತಾ ತೋರಿಸಿದ್ದರು ಸಹ ಜೀವಕ್ಜೆ ಬೆಲೆ ಕೊಡಲೇ ಬೇಕು. ಅಟೋ ಚಾಲಕರಿಗೆ ಸ್ವಲ್ಪ ಬದುಕಿನ ಪಾಠ ಹೇಳಿ ಹೊಟ್ಟೆ ತುಂಬಾ ಊಟ ಮಾಡಿಸಿ ಮನೆಗೆ ಕಳುಹಿಸಿಕೊಟ್ಟಿದ್ದು ವಿಶೇಷ.
ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆದರೆ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅನಗತ್ಯವಾಗಿ ತಿರುಗಾಟ ನಡೆಸುತ್ತಿರುವವರ ಸಂಖ್ಯೆಯೂ ಜಾಸ್ತಿ ಇದೆ.ಹಾಗಾಗಿ, ಗೋಕುಲರಸ್ತೆ ಠಾಣಾ ಇನ್ಸ್ಪೆಕ್ಟರ್ ಖಾಲಿ ಮಿರ್ಚಿ ಹಾಗೂ ಉಪನಗರ ಠಾಣಾ ಇನ್ಸ್ಪೆಕ್ಟರ್ ರವಿಚಂದ್ರನ್ ನೇತೃತ್ವದಲ್ಲಿ ಫೀಲ್ಡಿಗಿಳಿದ ಪೊಲೀಸರು ಆಟೋಗಳನ್ನು ಸೀಜ್ ಮಾಡಿದ್ದರು.
ಸಭೆ ಯಶಸ್ವಿ; ಇನ್ನು ತಮ್ನ ಅಟೋಗಳನ್ನ ಅನಗತ್ಯವಾಗಿ ವಶಕ್ಕೆ ಪಡೆಯಲಾಗುತ್ತದೆ ಎಂದು ಅಟೋ ಚಾಲಕರು ಗೋಕುಲ ಪೊಲೀಸ್ ಠಾಣೆಯ ಪಿಐ ಜೊತೆಗೆ ವಾಗ್ವಾದಕ್ಕೆ ಇಳಿದರು. ನಂತರ ಶಾಸಕ ಅರವಿಂದ ಬೆಲ್ಲದ ನಿವಾಸಕ್ಕೆ ತೆರಳಿ ಶಾಸಕರಿಗೆ ಮನವಿ ನೀಡಲಾಯಿತು. ತಕ್ಷಣ ಶಾಸಕರು ಡಿಸಿಪಿ ರಾಮರಾಜನ್ ಅಟೋ ಚಾಲಕರ ಸಂಘದ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಿ ಕೂಡಲೇ ಬಲವಾದ ಕಾರಣವಿದ್ದರೆ ಮಾತ್ರ ಅವಕಾಶ ನೀಡಿ ಎಂದು ಕರಾರು ಹಾಕಿ ಅಟೋ ಬಿಡುಗಡೆ ಮಾಡಿದರು.
ಊಟ ಹಾಕಿದ ಪಿಐ ಕಾಲಿಮಿರ್ಚಿ- 27 ಕ್ಕೋ ಅಟೋ ವಶಕ್ಕೆ ಪಡೆದಿದ್ದ ಗೋಕುಲ ಪೊಲೀಸ್ ಠಾಣೆಯ ಪಿಐ ಕಾಲಿಮಿರ್ಚಿ ಅಟೋ ಚಾಲಕರಿಗೆ ಅನಗತ್ಯವಾಗಿ ರಸ್ತೆಗೆ ಇಳಿಯದಂತೆ ತಾಕೀತು ಮಾಡಿ ನಂತರ ಠಾಣೆಯಲ್ಲಿಯೇ ಊಟ ಮಾಡಿಸಿ ಅಟೋ ಬಿಡುಗಡೆ ಮಾಡಿದರು.
Check Also
ಹೆಣ್ಣು ಮಕ್ಕಳೇ ಸ್ಟಾಂಗು ಗುರು ಕಾರ್ಯಕ್ರಮ ಸ್ಟಾರ್ ಸುವರ್ಣ ಚಾಲನೆ
Spread the loveಹುಬ್ಬಳ್ಳಿ: ನಗರದ ವಿನೂತನ ಪೌಂಡೇಶನ್ ಹುಬ್ಬಳ್ಳಿ ಅಧ್ಯಕ್ಷರು ಅಕ್ಕಮ್ಮಾ ಕಂಬಳಿ ಮುಂತಾದವರ ನೇತೃತ್ವದಲ್ಲಿ ಹೆಣ್ಣು ಮಕ್ಕಳೇ ಸ್ಟಾಂಗು …