ಮನೆದೇವರು ತೊರವಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಗೆ ಸಚಿವ ಪ್ರಹ್ಲಾದ ಜೋಶಿ ಪೂಜೆ ಸಲ್ಲಿಕೆ

Spread the love

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ 5ನೇ ಬಾರಿ ಕಣಕ್ಕಿಳಿದಿರುವ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ಇಂದು ತಮ್ಮ ಮನೆದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಬಿಜಾಪುರ ಜಿಲ್ಲೆಯ ತೊರವಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.
*ಕುಲಗೋಡ ಬಲಭೀಮ ದೇಗುಲಕ್ಕೂ ಭೇಟಿ* ಬಳಿಕ ಕುಲಗೋಡದ ಇತಿಹಾಸ ಪ್ರಸಿದ್ಧ ಶ್ರೀ ಬಲಭೀಮ ದೇವಸ್ಥಾನಕ್ಕೂ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಆಂಜನೇಯ ಸ್ವಾಮಿಯಲ್ಲಿ ಲೋಕ ಕಲ್ಯಾಣಕ್ಕೆ ಪ್ರಾರ್ಥನೆ ಮಾಡಿದರು.


Spread the love

Leave a Reply

error: Content is protected !!