ಹುಬ್ಬಳ್ಳಿ;
ಧಾರವಾಡ ಲೋಕಸಭಾ ವ್ಯಾಪ್ತಿಯ ನವಲಗುಂದ ನಗರದ ಅಪ್ಪಾಜಿ ಗಾರ್ಡನ್ ನಲ್ಲಿ ಶುಕ್ರವಾರ ನವಲಗುಂದ ಮತಕ್ಷೇತ್ರದ ಮುಖಂಡರ ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಯಿತು.
ಲೋಕಸಭಾ ಕ್ಷೇತ್ರದ ಚುನಾವಣೆಯ ಪ್ರಚಾರ ಮತ್ತು ಮುಂದಿನ ರೂಪುರೇಷಗಳ ಕುರಿತು ಸಾರ್ವಜನಿಕ ಅಭಿಪ್ರಾಯ ಹಾಗು ಪ್ರಚಾರದ ಯೋಜನೆಯ ಕುರಿತು ಸಭೆಯಲ್ಲಿ ಸವಿವರವಾಗಿ ಚರ್ಚಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಭ್ಯರ್ಥಿ ವಿನೋದ ಅಸೂಟಿ ಅವರು ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ, ಇದು ಕಾಂಗ್ರೆಸ್ ಪಕ್ಷದ ಗೆಲುವಿನ ಸೂಚಕ. ಕಾಂಗ್ರೆಸ್ ಬರಲಿದೆ ಬದಲಾವಣೆ ತರಲಿದೆ ಎಂಬ ಆಶಯ ನಮ್ಮೆಲ್ಲರಲ್ಲಿ ಹೊಸ ಭರವಸೆ ಮೂಡಿಸುತ್ತಿದೆ ಎಂದರು. ಅದಕ್ಕಾಗಿ ನವಲಗುಂದ ಭಾಗದ ಎಲ್ಲ ಮತ ಭಾಂದವರು ನನ್ನ ನ್ನೂ ಬೆಂಬಲಿಸಿ ಗೆಲುವಿಗೆ ಕಾರಣಿ ಭೂತರಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಎನ್.ಎಚ್ ಕೋನರಡ್ಡಿ, ಕೆಪಿಸಿಸಿ ಸದಸ್ಯರಾದ ವಿಜಯ ಕುಲಕರ್ಣಿ, ನ್ಯಾಯವಾದಿ ವಿ ಪಿ ಪಾಟೀಲ, ಬಾಪುಗೌಡ ಪಾಟೀಲ, ಶಾಂತಮ್ಮ ಗುಜ್ಜಳ, ಉಸ್ಮಾನ್ ಬಬರ್ಚಿ, ಆರ್ ಎಚ್ ಕೋನರಡ್ಡಿ, ನವಲಗುಂದ & ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವರ್ಧಮಾನಗೌಡ್ರ ಹಿರೇಗೌಡ್ರ ಮತ್ತು ಮಂಜುನಾಥ ಮಾಯಣ್ಣನವರ ಮತ್ತು ನವಲಗುಂದ-ಅಣ್ಣಿಗೇರಿ-ಹುಬ್ಬಳ್ಳಿ ತಾಲೂಕು ಮುಖಂಡರು,ಸರಕಾರದ ನಾಮನಿರ್ದೇಶಿತ ಸದಸ್ಯರು, ಪುರಸಭೆಯ ನಿಕಟಪೂರ್ವ ಅಧ್ಯಕ್ಷರುಗಳು & ಸದಸ್ಯರು, ಜಿಪಂ ತಾಲೂಕು ಪಂಚಾಯತ ಮಾಜಿ ಹಾಗೂ ಹಾಲಿ ಅಧ್ಯಕ್ಷರು ಮತ್ತು ಸದಸ್ಯರು, ಪಕ್ಷದ ಮುಖಂಡರು ಅಭಿಮಾನಿಗಳು, ಹಿರಿಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು..