ಅವರ ಮಾತು ಅವರ ಸಂಸ್ಕೃತಿಯನ್ನ ತೋರಿಸುತ್ತದೆ : ಜೋಶಿ ಅಸಮಾಧಾನ

Spread the love

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ಸಿದ್ದರಾಮಯ್ಯ
ಪುತ್ರ ಯತೀಂದ್ರ ಅವರು ಅವಾಚ್ಯವಾಗಿ, ಅಸಭ್ಯವಾಗಿ
ನಿಂದಿಸಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದುಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಹ್ಲಾದ ಜೋಶಿ ಕಿಡಿಯಾದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಭಯವದಲ್ಲಿ ಕಾಂಗ್ರೆಸ್ ನಾಯಕರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅಮಿತ್ ಶಾ ವಿರುದ್ಧ ಕಾಂಗ್ರೆಸ್‌ ಸುಳ್ಳು ಕೇಸ್ ಹಾಕಿತ್ತು. ಎಲ್ಲವೂ ತಿರಸ್ಕೃತಗೊಂಡಿವೆ ಹಾಗೂ ದೋಷಮುಕ್ತರಾಗಿದ್ದಾರೆ ಎಂದರು. ನಲಪಾಡ್‌ನಂಥವರನ್ನು ಪಕ್ಷದಲ್ಲಿಟ್ಟುಕೊಂಡಿರುವ ಇವರು, ಗುಂಡಾಗರ್ದಿ ಬಗ್ಗೆ ಮಾತನಾಡುತ್ತಿದ್ದಾರೆ. ದೇಶ ಕಂಡ ಅತ್ಯಂತ ದಕ್ಷ ಗೃಹ ಮಂತ್ರಿ ಅಮಿತ್‌ಶಾ. ಅವರ ಬಗೆಗೆ ಮಾತನಾಡಿರೋದು ಅವರ ನಾಲಿಗೆಯ ಸಂಸ್ಕೃತಿ ತೋರಿಸುತ್ತದೆ. ಕಾಂಗ್ರೆಸ್‌ನವರು ಸಂವಿಧಾನಕ್ಕೆ ಯಾವತ್ತೂ ಗೌರವ ಕೊಟ್ಟಿಲ್ಲ. ಸಂವಿಧಾನದ ಕತ್ತು ಹಿಸುಕಿದರು. ನಾವು ಸಂವಿಧಾನದ ದಿನಾಚರಣೆ ಜಾರಿಗೆ ತಂದಿದ್ದೇವೆ. ಆದರೆ, ಕಾಂಗ್ರೆಸ್‌ನವರು ಸಂವಿಧಾನ ಬದಲಾವಣೆಯ ಅಪಪ್ರಚಾರ ಮಾಡುತ್ತಿದ್ದಾರೆ. ಕೆಟ್ಟ ಭಾಷೆ ಬಳಸುವುದು ಸೋಲಿನ ಹತಾಶೆಯ ಪ್ರತೀಕ ಎಂದು ದೂರಿದರು.
ಅಮಿತ್ ಶಾ ಮೇಲೆ ಕಾಂಗ್ರೆಸ್ ಸುಳ್ಳು ಕೇಸ್ ಹಾಕಿತ್ತು ಅವರ ಎಲ್ಲ ಕೇಸ್ ಸುಪ್ರೀಂ ಕೋರ್ಟ್ ಕಿತ್ತು ಹಾಕಿದೆ ಎಂದ ಅವರು ಅಮಿತ್ ಶಾ ಈಗ ಸಂಪೂರ್ಣವಾಗಿ ದೋಷಮುಕ್ತರಾಗಿದ್ದಾರೆ.
ನಲಪಾಡ್ ರನ್ನ ಇಟ್ಟುಕೊಂಡು ಗುಂಡಾ ಗರ್ದಿ ಬಗ್ಗೆ ಮಾತಾಡ್ತೀದಾರೆ
ನಲಪಾಡ್‌ ನಂತವರು ಕಾಂಗ್ರೆಸ್ ನಲ್ಲಿ ಬಹಳ‌ ಜನ ಇದಾರೆ
ಅವರ ಬಗ್ಗೆ ನಾನ‌ ಮಾತಾಡಲ್ಲ ಎಂದರು. ಅಮಿತ್ ಶಾ ಅವರು ದಕ್ಷ ಗೃಹ ಮಂತ್ರಿಯಾಗಿ ಕೆಲಸ ಮಾಡಿದ್ದಾರೆಅವರ ವಿರುದ್ದ ಮಾತಾಡಿರೋದು‌ ನಾಲಿಗೆಯ ಸಂಸ್ಕ್ರತಿ ತೋರಸುತ್ತೆ
ಸಂವಿಧಾನದ ಕುತ್ತಿಗೆ ಹಿಚುಕಿದ್ದೆ ಕಾಂಗ್ರೆಸ್ ಪಕ್ಷ ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನದ ಕುತ್ತಿಗೆ ಹಿಚುಕಿದೆನಮಗೆ ಸಂವಿಧಾನವೇ ಪರಮೋಚ್ಛ ಎಂದ ಅವರು
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರಚನೆ ಮಾಡಿರೋ ಸಂವಿಧಾನವೇ ನಮಗೆ ಪರಮೋಚ್ಛವಾಗಿದೆ
ಸಂವಿಧಾನಕ್ಕೆ ಕಾಂಗ್ರೆಸ್ ಯಾವತ್ತೂ ಗೌರವ ಕೊಟ್ಟಿಲ್ಲ
ನಾವು ಆನೆ ಮೇಲೆ ಸಂವಿಧಾನ‌ ಪ್ರತಿ ಇಟ್ಟು ಗೌರವ ಕೊಟ್ಟಿದ್ದೇವೆ
ಸಂವಿಧಾನ ಬದಲಾವಣೆ ಮಾಡ್ತಾರೆ ಎಂದು ಅಪಪ್ರಚಾರ ಮಾಡ್ತೀದಾರೆ
ಮೋದಿ ಅವರ ವಿರುದ್ದ ಏಕವಚನ ಬಳಸೋದು ಕಾಂಗ್ರೆಸ್ ಸೋಲಿನ ಪ್ರತೀಕ ಎಂದರು.


Spread the love

Leave a Reply

error: Content is protected !!