ಬೆಳಗಾವಿ:ಮೂರು ರಾಜ್ಯಗಳ ಕೊಂಡಿ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ನಿಮಿತ್ತ ವ್ಯಾಪಕ ತಪಾಸಣೆ ಕೈಗೊಳ್ಳಲಾಗಿದ್ದು, 7.98ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.
ಗೋವಾದಿಂದ ಕರ್ನಾಟಕದ ಬೆಳಗಾವಿಯತ್ತ ಆಗಮಿಸುತ್ತಿದ್ದ ಬಸ್ಸನ್ನು ಕಣಕುಂಬಿ ಚೆಕ್ ಪೋಸ್ಟನಲ್ಲಿ ಪರಿಶೀಲಿಸಿದಾಗ ಏಳು ಲಕ್ಷ ತೊಂಬತ್ತೆಂಟು ಸಾವಿರ ಹಣ ದೊರೆತಿದೆ.
ಬೆಳಗಾವಿ ಜಿಲ್ಲೆಯ ಸಂಜಯ ಬಸವರಾಜ ರೆಡ್ಡಿ ಎಂಬುವವರಿಗೆ ಈ ದಾಖಲೆ ರಹಿತ ಹಣ ಸೇರಿದ್ದು, ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
