40 ವರ್ಷಗಳ ಕಾಲ ಮಹಾದಿಗ್ಗಜರ ಸಮಾಗಮ- ಸಡಗರ ಸಂಭ್ರಮದಿಂದ ಹೋಳಿ ಹಬ್ಬ ಆಚರಣೆ

Spread the love

ಹುಬ್ಬಳ್ಳಿ:ರಂಗುರಂಗಿನ ಹೋಳಿ ಹಬ್ಬದ ರಂಗಪಂಚಮಿ ಅಂಗವಾಗಿ
ನಗರದಲ್ಲಿಂದು ಜಾತಿ ಮತ ಪಂಥ ಎನ್ನದೇ ಸಡಗರ ಸಂಭ್ರಮದಿಂದ ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬ ಆಚರಣೆ ಮಾಡಲಾಯಿತು.
ರತಿ-ಕಾಮಣ್ಣರ ಮೂರ್ತಿ ವಿಶೇಷ ಪೂಜೆ ಸಲ್ಲಿಸಿ ಅದ್ಧೂರಿ ಮೆರವಣಿಗೆ ನಡೆಸಿ ದಹನ ಮಾಡುವ ಮೂಲಕ ಎಲ್ಲರೂ ಸೇರಿ ಸಂಭ್ರಮದಿಂದ ಓಕುಳಿ ಆಟವಾಡಿ ಹಬ್ಬಕ್ಕೆ ವಿದಾಯ ಹೇಳಿದರು.
ನಗರದ ಮೇದಾರ ಓಣಿ, ಹೊಸ ಮೇದಾರ ಓಣಿ, ಕಮರಿಪೇಟೆ, ದಾಜಿಬಾನಪೇಟೆ, ಅಂಚಟಗೇರಿ ಓಣಿ, ಹಳೆ ಹುಬ್ಬಳ್ಳಿ, ದುರ್ಗದ ಬೈಲ್ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿನ ರತಿ-ಕಾಮಣ್ಣರ ಮೂರ್ತಿ ಗಮನ ಸೆಳದವು.
ಇಲ್ಲಿನ ಹಳೇ ಮೇದಾರ ಓಣಿ ಹಾಗೂ ಹೊಸ ಮೇದಾರ ಓಣಿಯ ಕಾಮಣ್ಣಗಳು ಹೆಚ್ಚಿನ ಪ್ರಸಿದ್ಧಿ ಹೊಂದಿದೆ. ಕಳೆದ 75 ವರ್ಷಗಳಿಂದ ಇಲ್ಲಿನ ಹಳೇ ಮೇದಾರ ಓಣಿಯಲ್ಲಿ ಜನರೆಲ್ಲ ಸೇರಿ ಸಂಪೂರ್ಣವಾಗಿ ಬಿದಿರಿನಿಂದ 22 ಅಡಿ ಎತ್ತರದ ಕಾಮಣ್ಣನರು ಅಣ್ಣ ತಮ್ಮಂದಿರು. ಕಳೆದ 40 ವರ್ಷಗಳ ಹಿಂದೆ ಕ್ಷುಲಕ ಕಾರಣಕ್ಕೆ ಗಲಾಟೆ ನಡೆದು ಮಹಾದಿಗ್ಗಜರು ಅಗಲಿದ್ದರು. ಆದರೆ ವರ್ಷ ದುರ್ಗದ ಬೈಲ್ ನಲ್ಲಿ ಸಮಾಗಮಗೊಂಡರು. ಇಡೀ ಕರ್ನಾಟಕದಲ್ಲಿಯೇ ದೊಡ್ಡದಾದ ಮೂರ್ತಿ ಇವಾಗಿದ್ದು ಇವುಗಳಿಗೆ ಬಹು ಇತಿಹಾಸ ಇದೆ.
ಈ ಎರಡೂ ಓಣಿಯ ಮೂರ್ತಿಗಳನ್ನು 5ನೇ ದಿನದಂದು ಅದ್ಧೂರಿ ಮೆರವಣಿಗೆ ನಡೆಸಿ ಇಲ್ಲಿನ ದುರ್ಗದ ಬೈಲಿನಲ್ಲಿ ಸಮ್ಮಿಲನಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಆದರೆ, ವರ್ಷಗಳಿಂದ ಈ ಪದ್ಧತಿ ನಿಲ್ಲಿಸಲಾಗಿತ್ತು. ಈಗ ಈ ವರ್ಷದಿಂದ ಮತ್ತೇ ಚಾಲನೆ ನೀಡಿದ್ದು, 5ನೇ ದಿನದಂದು ಅದ್ಧೂರಿ ಮೆರವಣಿಗೆ ನಡೆಸಿ ದುರ್ಗದಬೈಲಿನಲ್ಲಿ ಎರಡೂ ಮೂರ್ತಿಗಳನ್ನು ಸಮ್ಮಿಲನಗೊಂಡ ಬಗ್ಗೆ ಪೂಜೆ ಸಲ್ಲಿಸಲಾಯಿತು ಎಂದು ಮುಖಂಡರು ತಿಳಿಸಿದರು.
ಗಮನ ಸೆಳೆದ ರೇನ್ ಡಾನ್ಸ್‌: ನಗರದ ವಿವಿಧ ಕಡೆಗಳಲ್ಲಿ ರೇನ್ ಡಾನ್ಸ್ ವ್ಯವಸ್ಥೆ ಮಾಡಲಾಗಿತ್ತು ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು.


Spread the love

Leave a Reply

error: Content is protected !!